ಕಾಸರಗೋಡು: ಕೋಟೆಕಣಿ ಶ್ರೀ ಮಲ್ಲಿಕಾರ್ಜುನ ಬಾಲಗೋ ಕುಲದ ಆಶ್ರಯದಲ್ಲಿ ದೀಪಾವಳಿ ಆಚರಿಸಲಾಯಿತು. ದೇವಸ್ಥಾನ ಪರಿಸರದಲ್ಲಿ ಅಣತೆಯನ್ನು ಬೆಳಗಿಸಲಾಯಿತು. ಬಾಲಗೋಕುಲ ಅಧ್ಯಕ್ಷ ವರಪ್ರಸಾದ್ ಕೋಟೆಕಣಿ ಉದ್ಘಾಟಿಸಿದರು. ನಗರಸಭಾ ಸದಸ್ಯೆ ದಿವ್ಯಾ ಸಂದೀಪ್ ಶುಭಕೋರಿದರು. ಮಕ್ಕಳು ಭಜನೆ ಹಾಡಿದರು. ಪಟಾಕಿ ಸಿಡಿಸಿ ಸಿಹಿ ಹಂಚಲಾಯಿತು. ಹಲವರು ಭಾಗವಹಿಸಿದರು.







