ಚಿನ್ನದ ಬೆಲೆಯಲ್ಲಿ ಗಣನೀಯ ಕುಸಿತ : 10 ದಿನದ ಮಧ್ಯೆ 6240 ರೂ. ಕಡಿತ

ತಿರುವನಂತಪುರ: ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಕಡಿತವುಂಟಾಗಿದೆ. ಇಂದು ಬೆಳಿಗ್ಗೆ ಕೇರಳ ಗೋಲ್ಡ್ ಆಂಡ್ ಸಿಲ್ವರ್ ಮರ್ಚೆಂಟ್ಸ್ ಅಸೋಸಿಯೇಶನ್ ಹೊರಡಿಸಿದ ಲೆಕ್ಕಗಳ ಪ್ರಕಾರ 22 ಕ್ಯಾರೆಟ್ ಚಿನ್ನಕ್ಕೆ ಗ್ರಾಂನಲ್ಲಿ 175 ರೂ. ಕಡಿಮೆಯಾಗಿದೆ. ಪವನ್ ಬೆಲೆಯಲ್ಲಿ 1400 ರೂ.ಗಳ ಕಡಿತವುಂಟಾಗಿದೆ. ಇಂದು ಗ್ರಾಂಗೆ 13060 ರೂ., ಪವನ್ಗೆ 1,04,480 ರೂ.ನಂತೆ ವ್ಯಾಪಾರ ನಡೆಯುತ್ತಿದೆ. ನಿನ್ನೆ 1 ಪವನ್ ಚಿನ್ನದ ದರ 1,05,880 ರೂ. ಹಾಗೂ ಗ್ರಾಂಗೆ 13,235 ರೂ. ಆಗಿತ್ತು. ಅಕ್ಟೋಬರ್ 11, 12ರಂದು ಈ ತಿಂಗಳ ಅತ್ಯಂತ ಗರಿಷ್ಠ ದರದಲ್ಲಿ ಮಾರಾಟವಾಗಿದೆ. 1,11,040 ರೂ. ಆಗಿತ್ತು ಅಂದಿನ ಬೆಲೆ. ರಾಜ್ಯದ ಚಿನ್ನದ ಬೆಲೆಯಲ್ಲಿ ಭಾರೀ ಮಟ್ಟದಲ್ಲಿ ಬದಲಾವಣೆಗಳು ಪ್ರತೀ ದಿನ ಉಂಟಾಗುತ್ತಿದೆ. ಅಂತಾರಾಜ್ಯ ಮಾರುಕಟ್ಟೆಗಳ ಬೆಲೆ ಹಾಗೂ ಡಾಲರ್ ಮತ್ತು ರೂಪಾಯಿ ವಿನಿಮಯ ದರ, ಆಮದು ಸುಂಕ ಮೊದಲಾದವುಗಳ ಆಧಾರದಲ್ಲಿ ರಾಜ್ಯದಲ್ಲಿ ಚಿನ್ನದ ಬೆಲೆ ನಿಗದಿಪಡಿಸಲಾಗುತ್ತಿದೆ.

RELATED NEWS

You cannot copy contents of this page