ಪೊಲೀಸರ ಮೇಲೆ ಹಲ್ಲೆಗೈದು  ಮಾದಕವಸ್ತು ಪ್ರಕರಣದ ಆರೋಪಿ ಪರಾರಿ: ಉಪೇಕ್ಷಿಸಿದ ಸ್ಕೂಟರ್‌ನಲ್ಲಿ ಎಂಡಿಎಂಎ ಪತ್ತೆ

ಉಪ್ಪಳ: ಮಾದಕವಸ್ತು ಪ್ರಕರಣದ ಆರೋಪಿಯೋರ್ವ ಪೊಲೀಸರ ಮೇಲೆ ಹಲ್ಲೆಗೈದು ಪರಾರಿಯಾಗಿದ್ದಾನೆ. ಪರಾರಿ ವೇಳೆ ಆರೋಪಿ ಉಪೇಕ್ಷಿಸಿದ ಸ್ಕೂಟರ್ ನಲ್ಲಿ 1.32 ಗ್ರಾಂ ಎಂಡಿಎಂಎ ಪತ್ತೆಯಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ರಾತ್ರಿ 8 ಗಂಟೆ ವೇಳೆ ಈ ಘಟನೆ ನಡೆದಿದೆ. ಮೂಸೋಡಿ ನಿವಾಸಿ ಮಜೀದ್ ಎಂಬಾತ ಪೊಲೀ ಸರಿಗೆ ಹಲ್ಲೆಗೈದು ಪರಾರಿಯಾಗಿದ್ದು ಆತನಿಗಾಗಿ ಶೋಧ ನಡೆಸಲಾಗುತ್ತಿ ದೆಯೆಂದೂ ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ:-ಮಜೀದ್ ಈ ಹಿಂದೆ ಮಾದಕವಸ್ತು ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಹುಡುಕಿಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ಡಾನ್ಸಾಪ್ ತಂಡದ ಸದಸ್ಯರಾದ ಆರಿಫ್ ಹಾಗೂ ಶೈಜು ನಿನ್ನೆ ರಾತ್ರಿ 8 ಗಂಟೆಗೆ ಬೈಕ್‌ನಲ್ಲಿ ಮುಸೋಡಿಗೆ ತೆರಳಿದ್ದಾರೆ.ಈ ವೇಳೆ ಎದುರಿನಿಂದ ಮಜೀದ್ ಸ್ಕೂಟರ್‌ನಲ್ಲಿ ಆಗಮಿಸಿದ್ದಾನೆ. ಕೂಡಲೇ ಪೊಲೀಸರು ಮಜೀದ್‌ನನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಮಜೀದ್ ಪೊಲೀಸರಾದ ಆರಿಫ್ ಹಾಗೂ ಶೈಜುರ ಮೇಲೆ ಹಲ್ಲೆ ನಡೆಸಿದ್ದಾನೆ. ಆರೋಪಿ ಹಾಗೂ ಪೊಲೀಸರ ಮಧ್ಯೆ ಹೊಕೈ ನಡೆದು ಆರೋಪಿಯನ್ನು ಪೊಲೀಸರು  ಕಸ್ಟಡಿಗೆ ತೆಗೆದಾಗ ಸಮೀಪದಲ್ಲೇ ಇರುವ ಮಜೀದ್‌ನ ಮನೆಯಿಂದ ಅವನ ತಂದೆ ಅಲ್ಲಿಗೆ ತಲುಪಿ ಪೊಲೀಸರ ಕೈಯಿಂದ ಮಜೀದ್‌ನನ್ನು ಬಿಡಿಸಿದ್ದಾನೆ. ಕೂಡಲೇ ಮಜೀದ್ ಸ್ಕೂಟರ್ ಉಪೇಕ್ಷಿಸಿ ಪರಾರಿಯಾಗಿದ್ದಾನೆ. ಈ ಮಾಹಿತಿ ತಿಳಿದು ಮಂಜೇಶ್ವರ ಠಾಣೆಯಿಂದ ಎಸ್‌ಐ ಗಳಾದ ಶಬರಿಕೃಷ್ಣನ್, ವೈಷ್ಣವ್,ಪೊಲೀಸ್ ಶ್ರೀಜಿತ್ ಎಂಬಿವರು ತಕ್ಷಣ ಸ್ಥಳಕ್ಕೆ ತಲುಪಿ ಹುಡುಕಾಡಿದರೂ ಮಜೀದ್‌ನನ್ನು ಪತ್ತೆಹಚ್ಚಲಾಗಲಿಲ್ಲ. ಬಳಿಕ ಆತ ಉಪೇ ಕ್ಷಿಸಿದ ಸ್ಕೂಟರ್ ತಪಾಸಣೆ ನಡೆಸಿದಾಗ ಅದರ ಸೀಟಿನ ಅಡಿ ಭಾಗದಲ್ಲಿ ಬಚ್ಚಿಟ್ಟಿದ್ದ ಎಂಡಿಎಂಎ ಪತ್ತೆಯಾಗಿದೆ. ಇದೇ ವೇಳೆ ಪೊಲೀಸರ ಕೈಯಿಂದ ಮಜೀದ್ ನನ್ನು ಬಿಡಿಸಿದ ಆತನ ತಂದೆ ವಿರುದ್ಧವೂ ಕೇಸು ದಾಖಲಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page