ಕಲ್ಲಿಕೋಟೆ: ಪನ್ನಿಯಂಗರದಲ್ಲಿ ಮಾರಾಟಕ್ಕಾಗಿ ತಲುಪಿಸಿದ 168 ಗ್ರಾಂ ಎಂಡಿಎಂಎ ಸೆರೆ ಹಿಡಿದ ಪ್ರಕರ ಣದಲ್ಲಿ ಪ್ರಧಾನ ಆರೋಪಿಗಳಾದ ತೃಶೂರ್ ಆಟೆಪರಂಬ್ ನಿವಾಸಿ ಮುಹಮ್ಮದ್ ಫೈಸಲ್ (36), ಕೊಲ್ಲಂ ಕೋಟಕ್ಕಲ್ ಮಞಂಪಾರ ನಿವಾಸಿ ಸಾಹಿಲ (29) ಎಂಬಿವರನ್ನು ಬೆಂಗಳೂರಿನಿಂದ ಸೆರೆ ಹಿಡಿಯಲಾಗಿದೆ.
ಪ್ರಕರಣದ ಇನ್ನೋರ್ವ ಆರೋಪಿಯಾದ ವಳವಣ್ಣ ನವಾಸಿ ನವಾಸ್‌ನನ್ನು ಈ ಮೊದಲೇ ಬಂಧಿಸಲಾಗಿತ್ತು. ಮುಹಮ್ಮದ್ ಫೈಸಲ್ ಹಾಗೂ ಸಾಹಿಲ ತನಗೆ ಮಾದಕ ಪದಾರ್ಥ ತಂದು ನೀಡುತ್ತಿರುವುದಾಗಿ ನವಾಸ್ ಪೊಲೀಸರಲ್ಲಿ ಹೇಳಿಕೆ ನೀಡಿದ್ದನು. ಈ ಹಿನ್ನೆಲೆಯಲ್ಲಿ ಸೈಬರ್ ಸೆಲ್‌ನ ಸಹಾಯದೊಂದಿಗೆ ನಡೆಸಿದ ತನಿಖೆಯಲ್ಲಿ ಇವರಿಬ್ಬರನ್ನು ಬೆಂಗಳೂರಿನಿಂದ ಸೆರೆ ಹಿಡಿಯಲಾಗಿದೆ. ಇವರಿಬ್ಬರ ಮೊಬೈಲ್ ಫೋನ್‌ಗಳನ್ನು ಪೊಲೀಸರು ಸಮಗ್ರವಾಗಿ ತನಿಖೆ ನಡೆಸುತ್ತಿದ್ದಾರೆ.






