ಮಂಜೇಶ್ವರ: ಉಪ್ಪಳ ಪತ್ವಾಡಿಯ ಮನೆಯೊಂದರಿಂದ ಭಾರೀ ಪ್ರಮಾಣದ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದ ಆರೋಪಿಯಾದ ಇನ್ನೋರ್ವ ನನ್ನು ಮಂಜೇಶ್ವರ ಪೊಲೀಸರು ಕರಿಪ್ಪೂರ್ ವಿಮಾನ ನಿಲ್ದಾಣ ದಿಂದ ಸೆರೆ ಹಿಡಿದಿದ್ದಾರೆ. ತೃಶೂರು ನೆಲ್ಲರಕಾಡ್ ನಿವಾಸಿ ಸರ್ಫುದ್ದೀನ್ (35) ಸೆರೆಗೀಡಾದ ಆರೋಪಿ ಯಾಗಿದ್ದಾನೆ. 2024 ಸೆಪ್ಟಂಬರ್ 20ರಂದು ಅಪರಾಹ್ನ 3.45ಕ್ಕೆ ಪತ್ವಾಡಿಯ ಮನೆಯೊಂದಕ್ಕೆ ದಾಳಿ ನಡೆಸಿದ ಪೊಲೀಸರು 3.407 ಕಿಲೋ ಎಂಡಿಎಂಎ ಮತ್ತು 642.65 ಗ್ರಾಂ ಗಾಂಜಾ ಸಹಿತ ವಿವಿಧ ರೀತಿಯ ಮಾದಕ ವಸ್ತುಗಳನ್ನು ವಶಪಡಿಸಿ ಕೊಂಡಿ ದ್ದರು. ಈ ಸಂಬಂಧ ಪತ್ವಾಡಿಯ ಅಸ್ಕರ್ ಅಲಿ (26) ಎಂಬಾತ ನನ್ನು ಈ ಹಿಂದೆ ಸೆರೆಹಿಡಿ ಯಲಾಗಿತ್ತು. ತಲೆಮರೆಸಿಕೊಂಡಿದ್ದ ಸರ್ಫುದ್ದೀನ್ ಗಲ್ಫ್‌ಗೆ ತೆರಳುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಮಂಜೇಶ್ವರ ಎಸ್.ಐ. ಶಬರಿಕೃಷ್ಣ ಹಾಗೂ ಚಂದ್ರಕಾಂತರ ನೇತೃತ್ವದಲ್ಲಿ ಶುಕ್ರವಾರ ರಾತ್ರಿ ಸರ್ಫುದ್ದೀನ್‌ನನ್ನು ಸೆರೆಹಿಡಿ ದಿದ್ದಾರೆ. ಈತನನ್ನು ವಿಚಾರಣೆ ನಡೆಸಿದ ಬಳಿಕ ನ್ಯಾಯಾ ಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ರಿಮಾಂಡ್ ವಿಧಿಸಲಾಗಿದೆ.







