ವೃದ್ದೆಯ ಮೃತದೇಹ ಬಾವಿಯಲ್ಲಿ ಪತ್ತೆ

ಬಂದಡ್ಕ: ಬೇಡಡ್ಕ ಚುಳ್ಳಿ ಉನ್ನತಿಯ ನಿವಾಸಿ ವೆಳ್ಳಚ್ಚಿ (90) ಬಾವಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಬೇಡಗಂ ಪೊಲೀಸರು ಹಾಗೂ ಅಗ್ನಿಶಾಮಕ ದಳ ತಲುಪಿ ಮೃತದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ದಿದ್ದಾರೆ.

ಬೇಡಗಂ ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ. ಮೃತರು ಮಕ್ಕಳಾದ ರಾಜನ್, ಮಾಧವಿ, ತೊಂಡಿಚ್ಚಿ, ಕುಂಞಿರಾಮನ್, ಕುಂಞಿಕ್ಕ, ನಾರಾಯಣಿ, ಅಳಿಯ ಮಾಣಿಕನ್, ಸೊಸೆಯಂದಿರಾದ ರಮಣಿ, ಕಾವೇರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page