ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಚುನಾವಣೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಡಿಸೆಂಬರ್ 9ರಂದು ಸಂಜೆ 6 ಗಂಟೆಯಿಂದ 11ರಂದು ಸಂಜೆ ಮತದಾನ ಕೊನೆಗೊಳ್ಳುವವರೆಗೆ ಡ್ರೈಡೇ ಆಗಿ ಆಚರಿಸಲಾಗುವುದು. ಈ ದಿನಗಳಲ್ಲಿ ಜಿಲ್ಲೆಯಲ್ಲಿ ಮದ್ಯ ಖರೀದಿಸುವುದು, ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅನಧಿಕೃತ ಮದ್ಯ ಸಂಗ್ರಹ, ಮಾರಾಟವನ್ನು ಕಠಿಣವಾಗಿ ತಡೆಯಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಅನಧಿಕೃತ ಮದ್ಯ ಮಾರಾಟದ ವಿರುದ್ಧ ತೀವ್ರ ನಿಲುವು ಉಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ಮತ ಎಣಿಕೆ ದಿನವಾದ ಡಿ. 13ರಂದು ಕೂಡಾ ಡ್ರೈಡೇ ಆಗಿ ಆಚರಿಸಲಾಗುವುದು.







