ಕಾಸರಗೋಡು: ಎಪ್ರಿಲ್ 9ರಂದು ನಡೆಯುವ ರಾಜ್ಯ ವಿಧಾನ ಸಭಾ ಚುನಾವಣೆಗೆ ಒಕ್ಕೂಟಗಳು ಹಾಗೂ ಪಕ್ಷಗಳು ಸಿದ್ಧಗೊಂಡಿ ದ್ದರೂ ಜಿಲ್ಲೆಯ ವಿವಿಧ ಮಂಡಲಗಳ ಅಭ್ಯರ್ಥಿ ನಿರ್ಣಯದಲ್ಲಿ ಇನ್ನೂ ಅಸ್ಪಷ್ಟತೆ ಮುಂದುವರಿಯುತ್ತಿದೆ. ಕಾಸರಗೋಡು ಹೊರತುಪಡಿಸಿ ಇತರ ನಾಲ್ಕು ಮಂಡಲಗಳಲ್ಲೂ ಅಭ್ಯರ್ಥಿಗಳನ್ನು ಘೋಷಿಸಿದ ಎಡರಂಗ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದೆ. ರಾಜ್ಯದ ಗಮನಾರ್ಹ ಮಂಡಲವಾದ ಮಂಜೇಶ್ವರದಲ್ಲಿ ಮೂರು ಒಕ್ಕೂಟಗಳಿಗೂ ಅಭ್ಯರ್ಥಿಗಳ ನಿರ್ಣಯವಾಗಿದೆ. ಹಾಲಿ ಶಾಸಕ ಮುಸ್ಲಿಂ ಲೀಗ್ನ ಎಕೆಎಂ ಅಶ್ರಫ್ ಯುಡಿಎಫ್ ಅಭ್ಯರ್ಥಿಯಾಗಿ ಮತ್ತೊಮ್ಮೆ ಚುನಾವಣಾ ಕಣಕ್ಕಿಳಿಯು ವರೆಂದು ಖಚಿತಗೊಂಡಿದೆ. ಅಭ್ಯರ್ಥಿ ಯ ಘೋಷಣೆ ಇಂದು ಸಂಜೆ ಅಥವಾ ನಾಳೆ ಉಂಟಾಗಬಹುದೆಂಬ ನಿರೀಕ್ಷೆ ಯಿದೆ. ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಈಗಾಗಲೇ ಮಂಜೇಶ್ವರ ಮಂಡಲದಲ್ಲಿ ಠಿಕಾಣಿ ಹೂಡಿ ಚುನಾವಣಾ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಎಡರಂಗ ಅಭ್ಯರ್ಥಿಯಾಗಿ ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದರನ್ನು ಘೋಷಿಸಲಾಗಿದೆ. ಇದರೊಂದಿಗೆ ಮಂಜೇಶ್ವರದಲ್ಲಿ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಮೂಡಿದೆ.
ಕಾಸರಗೋಡು ಮಂಡಲದಲ್ಲಿ ಯಾವುದೇ ಒಕ್ಕೂಟ ಅಭ್ಯರ್ಥಿ ಗಳನ್ನು ಘೋಷಿಸಿಲ್ಲ. ಮೂರು ಬಾರಿ ಶಾಸಕರಾದ ಎನ್.ಎ ನೆಲ್ಲಿಕುನ್ನು ಅವರೇ ಈ ಬಾರಿಯೂ ಯುಡಿಎಫ್ನಿಂದ ಸ ಸ್ಪರ್ಧಿಸಲಿದ್ದಾರೆಯೇ ಎಂದು ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಕೆ.ಎಂ. ಶಾಜಿ ಯವರ ಹೆಸರು ರಾಜ್ಯ ನಾಯಕತ್ವದ ಪರಿಗಣನೆಯಲ್ಲಿದೆ. ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ, ಜಿಲ್ಲಾ ಕೋಶಾಧಿ ಕಾರಿ ಮುನೀರ್ ಹಾಜಿ ಎಂಬಿವರ ಹೆಸರುಗಳು ರಾಜ್ಯ ನಾಯಕತ್ವದ ಪರಿಗಣನೆಯಲ್ಲಿದೆ. ಕಾಸರಗೋಡು ಮಂಡಲದಲ್ಲಿ ಅಭ್ಯರ್ಥಿಯಾಗಲು ಮಂಡಲದಲ್ಲೇ ಯೋಗ್ಯರಾದ ಹಲವರು ನೇತಾರರಿರುವಾಗ ಹೊರಗಿನವರನ್ನು ಅಭ್ಯರ್ಥಿಯಾಗಿಸುವುದರ ವಿರುದ್ಧ ಸ್ಥಳೀಯರಲ್ಲಿ ಅಸಮಾಧಾನವಿದೆ. ಕಾರ್ಯಕರ್ತರ ಅಭಿಪ್ರಾಯಕ್ಕೆ ಪಕ್ಷ ವಿಧೇಯವಾದಲ್ಲಿ ಜಿಲ್ಲೆಯ ನಿವಾಸಿ ಯನ್ನೇ ಅಭ್ಯರ್ಥಿಯಾಗಿಸುವ ಸಾಧ್ಯ ತೆಯಿದೆ. ಬಿಜೆಪಿಯಲ್ಲೂ ಅಭ್ಯರ್ಥಿಯ ನಿರ್ಣಯವಾಗಿಲ್ಲ. ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ, ವಲಯ ಅಧ್ಯಕ್ಷ ಕೆ.ಶ್ರೀಕಾಂತ್ ಎಂಬಿವರ ಹೆಸರುಗಳು ಪರಿಗಣ ನೆಯಲ್ಲಿದೆ. ಮಂಡಲದಲ್ಲಿ ರುವವರೇ ಅಭ್ಯರ್ಥಿಯಾಗಬೇಕೆಂಬ ಅಭಿಪ್ರಾಯ ಬಿಜೆಪಿಯಲ್ಲೂ ಇದೆಯೆಂ ದು ಹೇಳಲಾಗುತ್ತಿದೆ. ಎಡರಂಗ ಅಭ್ಯರ್ಥಿಗೆ ಸಂಬಂಧಿಸಿ ಇದುವರೆಗೆ ಯಾವುದೇ ನಿರ್ಧಾರವುಂಟಾಗಿಲ್ಲ. ಕಾಸರಗೋಡು ಮಂಡಲವನ್ನು ಐಎನ್ಎಲ್ಗೆ ನೀಡಲಾಗಿದೆ. ಆದರೆ ಎಡರಂಗ ಈ ಮಂಡಲವನ್ನು ಹೆಸರಿಗೆ ಮಾತ್ರ ನೀಡುತ್ತಿದೆ. ಆದ್ದರಿಂದ ಇನ್ನು ಕೂಡಾ ಇದನ್ನೇ ವಹಿಸಿಕೊಳ್ಳಲು ನಾವು ಅಶಕ್ತರೆಂದು ಐಎನ್ಎಲ್ ನಾಯಕತ್ವ ಎಡರಂಗ ನಾಯಕತ್ವಕ್ಕೆ ತಿಳಿಸಿದೆ. ಆದ್ದರಿಂದ ಓರ್ವ ಸ್ವತಂತ್ರ ಅಭ್ಯರ್ಥಿ ಯನ್ನು ಇಲ್ಲಿ ಕಣಕ್ಕಿಳಿಸುವ ಆಲೋ ಚನೆಯೂ ಇದೆಯೆಂದು ಹೇಳಲಾ ಗುತ್ತಿದೆ. ಉದುಮದಲ್ಲಿ ಎಡರಂಗ ಅಭ್ಯರ್ಥಿಯಾಗಿ ಹಾಲಿ ಶಾಸಕ ಸಿ.ಎಚ್. ಕುಂಞಂಬು ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಆದರೆ ಯುಡಿಎಫ್ ಅಭ್ಯರ್ಥಿ ಯಾರಾಗಿ ರಬೇಕೆಂಬ ವಿಷಯದಲ್ಲಿ ಗೊಂದಲ ಮುಂದುವರಿಯುತ್ತಿದೆ. ಮೂವರ ಹೆಸರುಗಳು ಇದೀಗ ಕೇಳಿಬರುತ್ತಿದೆ. ಬಿ.ಪಿ. ಪ್ರದೀಪ್ ಕುಮಾರ್, ಕೆ. ನೀಲಕಂಠನ್, ಬಿ.ಎಂ. ಜಮಾಲ್ ಎಂಬಿವರ ಹೆಸರುಗಳು ಪರಿಗಣನೆ ಯಲ್ಲಿದೆ. ಪ್ರದೀಪ್ ಯುಡಿಎಫ್ ಅಭ್ಯರ್ಥಿಯಾದರೆ ಈ ಬಾರಿ ಉದುಮದಲ್ಲಿ ಜಿದ್ದಾಜಿದ್ದಿನ ಹೋ ರಾಟ ನಡೆಯಲಿದೆಯೆಂದು ಅಂದಾ ಜಿಸಲಾಗಿದೆ. ಬಿಜೆಪಿ ಅಭ್ಯರ್ಥಿ ಯಾಗಿ ಕೆ. ಶ್ರೀಕಾಂತ್ರನ್ನು ಪರಿಗಣಿ ಸಬೇಕೆಂದು ಪಕ್ಷದೊಳಗೆ ಬೇಡಿಕೆ ಕೇಳಿಬಂದಿದೆಯೆಂದು ಹೇಳಲಾ ಗುತ್ತಿದೆ.
ಕಾಞಂಗಾಡ್ ಮಂಡಲದಲ್ಲಿ ಗೋವಿಂದನ್ ಪಳ್ಳಿಕಾಪಿಲ್ರನ್ನು ಸಿಪಿಐ ಅಭ್ಯರ್ಥಿ ಯಾಗಿ ಘೋಷಿಸಲಾಗಿದೆ. ಅವರು ಕೂಡಾ ಪ್ರಚಾರ ಆರಂಭಿಸಿದ್ದಾರೆ. ಆದರೆ ಗೋವಿಂದನ್ರ ಪ್ರತಿಸ್ಪರ್ಧಿಗಳು ಯಾರೆಂದು ಇನ್ನೂ ಸ್ಪಷ್ಟಗೊಂಡಿಲ್ಲ. ಹರೀಶ್ ನಾಯರ್, ಪಿ.ವಿ. ಸುರೇಶ್ ಎಂಬಿವರ ಹೆಸರುಗಳು ಯುಡಿಎಫ್ನ ಪರಿಗಣನೆಯಲ್ಲಿದೆ. ತೃಕರಿಪುರದಲ್ಲಿ ಎಡರಂಗ ಅಭ್ಯರ್ಥಿ ವಿಪಿಪಿ ಮುಸ್ತಫ ಪ್ರಚಾರ ಆರಂಭಿಸಿದ್ದಾರೆ. ಇಂದು ತೃಕರಿಪುರದಿಂದ ನೀಲೇಶ್ವರ ಕಾನ್ವೆಂಟ್ ಜಂಕ್ಷನ್ ವರೆಗೆ ಇವರು ರೋಡ್ ಶೋ ನಡೆಸಲಿದ್ದಾರೆ. ಇದೇ ವೇಳೆ ಯುಡಿ ಎಫ್ ಅಭ್ಯರ್ಥಿ ನಿರ್ಣಯ ವಾಗಿಲ್ಲ. ಪ್ರಸ್ತುತ ಈ ಮಂಡಲವನ್ನು ಕೇರಳ ಕಾಂಗ್ರೆಸ್ಗೆ ನೀಡಿರುವುದಾಗಿ ದೆ. ಆದರೆ ಈ ಬಾರಿ ಈ ಮಂಡಲವನ್ನು ಕಾಂಗ್ರೆಸ್ ಪಡೆದುಕೊಳ್ಳಲಿದೆಯೆಂದು ಹೇಳಲಾಗುತ್ತಿದೆ. ಹಾಗಾದಲ್ಲಿ ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅಭ್ಯರ್ಥಿ ಯಾಗುವ ಸಾಧ್ಯತೆಯಿದೆ.






