ಇಲೆಕ್ಟ್ರಿಕ್ ಸೈಕಲ್ ಅಪಘಾತ: ಗಾಯಗೊಂಡ ವ್ಯಕ್ತಿ ಮೃತ್ಯು

ಉಪ್ಪಳ:    ಬಾಯಾರು ಕೊಜಪ್ಪೆ  ಜಂಕ್ಷನ್ ಸಮೀಪ  ಇಲೆಕ್ಟ್ರಿಕ್ ಸೈಕಲ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ವ್ಯಕ್ತಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಬಾಯಾರು ಕೊಜಪ್ಪೆ ನಿವಾಸಿ ಇಬ್ರಾಹಿಂ (66) ಮೃತಪಟ್ಟ ದುರ್ದೈವಿ. ನಿನ್ನೆ ಬೆಳಿಗ್ಗೆ 9.30ರ ವೇಳೆ ಅಪಘಾತ ಉಂಟಾಗಿದೆ. ಅಳಿಯ ಚಲಾಯಿಸುತ್ತಿದ್ದ ಇಲೆಕ್ಟ್ರಿಕ್ ಸೈಕಲ್‌ನ ಹಿಂಬದಿ ಕುಳಿದು ಇಬ್ರಾಹಿಂ ಪ್ರಯಾಣಿಸುತ್ತಿದ್ದರು. ಕೊಜಪ್ಪೆ ಜಂಕ್ಷನ್ ಸಮೀಪ   ಸೈಕಲ್  ನಿಯಂತ್ರಣ  ಮಗುಚಿ ಬಿದ್ದು ಅಪಘಾತ ವುಂಟಾಗಿರುವುದಾಗಿ  ಹೇಳಲಾಗುತ್ತಿದೆ.  ಗಂಭೀರ ಗಾಯಗೊಂಡ ಇಬ್ರಾಹಿಂರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಚಿಕಿತ್ಸೆ ಫಲ ಕಾರಿಯಾಗದೆ ಮಧ್ಯಾಹ್ನ ವೇಳೆ ಮೃತಪಟ್ಟರು.

ಮೃತರು ಪತ್ನಿ ನಬೀಸ, ಮಕ್ಕಳಾದ ಅಬೂಬಕ್ಕರ್ ಸಿದ್ದಿಕ್, ಉಮ್ಮರ್ ಫಾರೂಕ್, ಮೊಹಮ್ಮದ್ ಅಶ್ರಫ್, ರಹ್ಮತ್ ಬೀವಿ ಕೆ, ರಮ್ಲತ್ ಬೀವಿ, ಸೊಸೆ ನೆಜೀಮ, ಅಳಿಯ ಉಸ್ಮಾನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page