ಕುಂಬಳೆ: ಪೆರ್ಮುದೆಯಲ್ಲಿ ನಿರ್ಮಾಣ ಹಂತದ ಕ್ವಾರ್ಟರ್ಸ್ ನಿಂದ ವಿದ್ಯುತ್ ಉಪಕರಣ ಗಳನ್ನು ಕಳವುಗೈದ ಬಗ್ಗೆ ದೂರಲಾ ಗಿದೆ. ಪೆರ್ಮುದೆ ಸಿಎಂ ಮಸೀದಿ ಸಮೀಪದ ಕ್ವಾರ್ಟರ್ಸ್ ನಿಂದ ಸುಮಾರು 10 ಸಾವಿರ ರೂಪಾಯಿ ಗಳ ಉಪಕರಣಗಳು ಕಳವಿಗೀಡಾ ಗಿದೆಯೆಂದು ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಸ್ತುತ ಸುಳ್ಯದಲ್ಲಿ ವಾಸಿಸುವ ಉಪ್ಪಳದ ಅಫ್ರಾನ್ ಅಸೀಸ್ ಮೊಹಮ್ಮದ್ ಎಂಬವರು ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಪೆರ್ಮುದೆ ಯಲ್ಲಿ ಮನೆಯೊಂದರಿಂದ 30 ಸಾವಿರ ರೂ. ಹಾಗೂ ಚೆಕ್ ಲೀಫ್ ಕಳವಿಗೀಡಾದ ಘಟನೆ ನಡೆದಿತ್ತು.
