ಬಾಯಾರು: ಬಾಯಾರು ಬಳಿಯ ತಲೆಂಗಳ ಬೀರ್ನಕೋಡಿ ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಉಂಟಾಗಿ ಬಟ್ಟೆ ಬರೆ ಸಹಿತ ದಾಖಲೆ ಪತ್ರ ಉರಿದು ನಾಶಗೊಂಡಿದೆ. ಕುಂಟುAಬ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದೆ. ಪೈವಳಿಕೆ ಪಂಚಾಯತ್‌ನ ಬೀರ್ನಕೋಡಿಯಲ್ಲಿ ವಾಸವಾಗಿರುವ ಚೋಮ ಎಂಬವರ ಮನೆಯಲ್ಲಿ ಮಂಗಳವಾರ ಮುಂಜಾನೆ 4.30ರ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಕೊಠಡಿಯಲ್ಲಿ ಬೆಂಕಿ ಉರಿಯುತ್ತಿರುವುದು ಮನೆಯವರ ಗಮನಕ್ಕೆ ಬಂದಿದೆ. ಕೂಡಲೇ ಚೋಮ, ಇವರ ಪತ್ನಿ ಪುಷ್ಪ, ಮಗ ಸತೀಶ, ಸೊಸೆ ಹರಿಣಾಕ್ಷಿ ಹಾಗೂ ಮೊಮ್ಮಕ್ಕಳು ಹೊರಗೆ ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ. ಬೆಂಕಿಯಿAದ ಕೊಠಡಿಯಲ್ಲಿದ್ದ ಮಕ್ಕಳ ಶಾಲಾ ಪುಸ್ತಕಗಳು, ಪ್ಯಾನ್, ಬಟ್ಟೆ ಬರೆಗಳು, ರೇಷನ್ ಕಾರ್ಡ್ ಸಹಿತ ಇತರ ದಾಖಲೆಗಳು ಉರಿದು ಹೋಗಿ ನಾಶ ನಷ್ಟಗೊಂಡಿರುವುದಾಗಿ ಮನೆಯವರು ತಿಳಿಸಿದ್ದಾರೆ. ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷೆ ಜಯಂತಿ, ಎಸ್.ಟಿ ಪ್ರಮೋಟರ್‌ಗಳಾದ ಶೀಲಾವತಿ, ಮಧುಶ್ರೀ ಹಾಗೂ ಸಿಬ್ಬಂದಿ, ವಿಲೇಜ್ ಅಧಿಕಾರಿ ಶಂಕರ, ಸಿಬ್ಬಂದಿಗಳು, ಜನಪ್ರತಿನಿಧಿ ಜಯಲಕ್ಷಿ÷್ಮÃ ಭಟ್, ಪೈವಳಿಕೆ ವಿದ್ಯುತ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
