ತಿರುವನಂತಪುರ: ರಾಜ್ಯ ತೀವ್ರ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದು, ಅದರಿಂದ ಜನರು ಈಗಾಗಲೇ ತೀವ್ರ ಸಂಕಷ್ಟ ಎದುರಿಸುತ್ತಿರುವ ವೇಳೆಯಲ್ಲೇ ರಾಜ್ಯದ ಜನತೆಗೆ ವಿದುತ್ ದರ ಏರಿಸುವ ಭಾರೀ ಶಾಕ್ ನೀಡಲಾಗಿದೆ.
ಇದರಂತೆ ಕೇವಲ ವಿದ್ಯುತ್ ದರ ಮಾತ್ರವಲ್ಲ ಇನ್ನು ಅದರ ಸರ್ಚಾರ್ಜ್ ದರವನ್ನು ಅದರ ಜತೆಗೆ ಏರಿಸುವ ಹೊಸ ವಿದ್ಯುತ್ ತಾರೀಫ್ ನೀತಿಯ ಅಧಿ ಸೂಚನೆಯನ್ನು ರಾಜ್ಯ ವಿದ್ಯುತ್ ನಿಯಂ ತ್ರಣ ಪ್ರಾಧಿಕಾರ ವಿದ್ಯುಕ್ತವಾಗಿ ಪ್ರಕಟಿಸಿದೆ. ಈ ಹೊಸ ವಿದ್ಯುತ್ ನೀತಿ ಮುಂದಿನ ಎಪ್ರಿಲ್ನಿಂದ ಜಾರಿಗೆ ಬರಲಿದೆ.
ರಾಜ್ಯ ವಿದ್ಯುನ್ಮಂಡಳಿಗೆ ಮುಂದೆ 5000 ಕೋಟಿ ರೂ.ಗಳ ತನಕ ನಷ್ಟ ಉಂಟಾಗಬಹುದೆಂದು ಲೆಕ್ಕಹಾಕಲಾ ಗಿದ್ದು ಹೀಗೆ ಉಂಟಾಗಿರುವ ಆರ್ಥಿಕ ಹೊರೆ ಹಾಗೂ ಹೊರಗಿನಿಂದ ವಿದ್ಯುತ್ ಖರೀದಿಸುವ ಒಡಂಬಡಿಕೆ ಯಿಂದ ಉಂಟಾಗುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ವಿದ್ಯುತ್ ಬಳಕೆದಾರರ ಹೆಗಲ ಮೇಲೆ ಬರುವಂತೆ ಮಾಡುವುದಾಗಿದೆ ಈ ಹೊಸ ವಿದ್ಯುತ್ ನೀತಿ.ಇದು ಇಷ್ಟಕ್ಕೇ ಮುಂದುವರಿಯು ವುದಿಲ್ಲ. ಇಂಧನ ಸರ್ಚಾರ್ಜ್ನ್ನು ಇದರಲ್ಲಿ ಒಳಪಡಿಸಲಾಗುವುದು. ಇದರ ಹೊರತಾಗಿ ವಿದ್ಯುತ್ ಉಪಯೋಗದ ಪೀಕ್ ಸಮಯವನ್ನು ಬದಲಾಯಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಇದರಂತೆ ಇನ್ನು ಸಂಜೆ 6ಗಂಟೆಯಿಂದ ರಾತ್ರಿ 11.30ರ ತನಕ ಅತೀ ಹೆಚ್ಚು ಬಳಸುವ ಪೀಕ್ ಸಮಯವನ್ನಾಗಿ ಪರಿಗಣಿಲಾಗುವುದು. ಈ ವೇಳೆಯಲ್ಲಿ ಉಪಯೋಗಿಸುವ ವಿದ್ಯುತ್ಗೆ ಹೆಚ್ಚು ದರ ನೀಡಬೇಕಾಗಿ ಬರಲಿದೆ. ಅಂದರೆ ಹೊಸ ತಾರೀಫ್ ನೀತಿ ಜ್ಯಾರಿಗೊಂಡಲ್ಲಿ ವಿದ್ಯುತ್ ಬಳಕೆದಾರರು ಅದರಲ್ಲೂ ಬಡ ಹಾಗೂ ಮದ್ಯಮ ವರ್ಗದ ವಿದ್ಯುತ್ ಬಳಕದಾರರ ಮೇಲೆ ಇನ್ನಷ್ಟು ಆರ್ಥಿಕ ಹೊರೆ ಹೇರಲ್ಪಡಲಿದೆ.







