ಕಾಸರಗೋಡು: ಸಾಮಾಜಿಕ ಮಾಧ್ಯಮದ ಮೂಲಕ ಆನ್‌ಲೈನ್ ಟ್ರೇಡಿಂಗ್ ನಡೆಸಿದಲ್ಲಿ ಭಾರೀ ಲಾಭ ಲಭಿಸಲಿದೆಯೆಂಬ ಭರವಸೆ ನೀಡಿ ವ್ಯಕ್ತಿಯೋರ್ವರಿಂದ 23.72ಕೋಟಿ ರೂ. ಲಪಟಾಯಿಸಿದ ಬಗ್ಗೆ ಕಾಸರ ಗೋಡು ಸೈಬರ್ ಕ್ರೈಂ ಪೊಲೀ ಸ್ ಠಾಣೆಗೆ ದೂರು ನೀಡಲಾಗಿದೆ. ಬಂದಡ್ಕ ನಿವಾಸಿಯಾಗಿರುವ 35ರ ಹರೆಯದ ಯುವಕ ಈ ದೂರು ನೀಡಿದ್ದು, ಅದರಂತೆ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಅಮಿತ ಲಾಭ ನೀಡುವುದಾಗಿ ನಂಬಿಸಿ ವಂಚನೆಗಾ ರರು ಮಾರ್ಚ್ 18 ಮತ್ತು ಜೂನ್ 12ರ ನಡುವಿನ ಅವಧಿಯಲ್ಲಿ ಆನ್ ಲೈನ್ ಮೂಲಕ ತನ್ನಿಂದ 23.72 ಲಕ್ಷ ರೂ. ಪಡೆದರೆಂದು ನಂತರ ಲಾಭಾಂಶವನ್ನಾಗಲೀ, ನೀಡಿದ ಹಣವನ್ನಾಗಲೀ ಹಿಂತಿರುಗಿಸದೆ ವಂಚಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವಕ ಆರೋಪಿಸಿದ್ದಾನ.
