ನಿಷೇಧಿತ ಪ್ಲಾಸ್ಟಿಕ್ ಪ್ಲೇಟ್, ಗ್ಲಾಸ್ ವಶಪಡಿಸಿ  ದಂಡ ಹೇರಿದ ಎನ್‌ಫೋರ್ಸ್‌ಮೆಂಟ್ ತಂಡ

ಕಾಸರಗೋಡು: ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್  ಚೆಂಗಳ ಪಂಚಾಯತ್ ವ್ಯಾಪ್ತಿಯಲ್ಲಿ  ನಡೆಸಿದ ತಪಾಸಣೆಯಲ್ಲಿ ಕ್ವಿಂಟಾಲ್ ಲೆಕ್ಕದಲ್ಲಿ ನಿಷೇಧಿತ ಪ್ಲಾಸ್ಟಿಕ್ ಪ್ಲೇಟ್, ಗ್ಲಾಸ್‌ಗಳನ್ನು ವಶಪಡಿಸಿದೆ. ಚೆರ್ಕಳ ರಖಂ ವ್ಯಾಪಾರ ಸಂಸ್ಥೆಯ ಗೋದಾಮಿನಿಂದ ಇವುಗಳನ್ನು ವಶಪಡಿಸಲಾಗಿದ್ದು, ಮಾಲಕನಿಗೆ 25,೦೦೦ ರೂ. ದಂಡ ಹೇರಲಾಗಿದೆ.  ನಿಷೇಧಿತ ಉತ್ಪನ್ನಗಳ ಉಪ ಯೋಗ, ಸಂಗ್ರಹ, ಮಾರಾಟ ತಡೆಯುವುದರ ಅಂಗವಾಗಿ ತಪಾಸಣೆಗಳನ್ನು ಇನ್ನಷ್ಟು ಬಿಗು ಗೊಳಿಸಲಾಗುವುದೆಂದು ಅಧಿ ಕಾರಿಗಳು ತಿಳಿಸಿದ್ದಾರೆ. ಅನ್ಯರಾಜ್ಯ ಕಾರ್ಮಿಕರು ವಾಸಿಸುವ ಚಟ್ಟಂ ಚಾಲ್‌ನ ಕ್ವಾರ್ಟರ್ಸ್‌ನಿಂದಿರುವ ಮಲಿನ ಜಲ ಹರಿಯಬಿಟ್ಟ ಹಿನ್ನೆಲೆಯಲ್ಲಿ ಹಾಗೂ ಅಜೈವಿಕ ತ್ಯಾಜ್ಯಗಳನ್ನು ಹಸಿರು ಕ್ರಿಯಾಸೇನೆಗೆ ಹಸ್ತಾಂತರಿಸದೆ ನಿರ್ಲಕ್ಷ್ಯದಿಂದ ಪರಿಸರದಲ್ಲಿ ರಾಶಿ ಹಾಕಿದ ಹಿನ್ನೆಲೆಯಲ್ಲಿ ಕಟ್ಟಡ ಮಾಲಕನಿಗೆ 15,೦೦೦ ರೂ. ದಂಡ ಹೇರಲಾಗಿದೆ. ಪೊಯಿನಾಚಿಯ ಸೂಪರ್ ಮಾರ್ಕೆಟ್ ಮಾಲಕನಿಂದ ಪ್ಲಾಸ್ಟಿಕ್ ತ್ಯಾಜ್ಯ ಬಹಿರಂಗವಾಗಿ ಉಪೇಕ್ಷಿಸಿದ ಹಿನ್ನೆಲೆಯಲ್ಲಿ 5,೦೦೦ ರೂ. ದಂಡ ವಸೂಲು ಮಾಡಲಾಗಿದೆ.

ಮುಳಿಯಾರು ಸರಕಾರಿ ಯುಪಿ ಶಾಲೆ ಅಧಿಕಾರಿಗಳಿಗೂ ಪ್ಲಾಸ್ಟಿಕ್ ಸಹಿತದ ತ್ಯಾಜ್ಯಗಳನ್ನು ಉರಿಸಿದ ಹಿನ್ನೆಲೆಯಲ್ಲಿ ದಂಡ ಹೇರಲಾಗಿದೆ. ತಪಾಸಣಾ ತಂಡದಲ್ಲಿ ಕೆ.ವಿ. ಮುಹಮ್ಮದ್ ಮದನಿ, ಜೋಸ್ ವಿ.ಎಂ, ಹೆಲ್ತ್ ಇನ್ಸ್‌ಪೆಕ್ಟರ್‌ಗಳಾದ ಅಶ್ವತಿ ಸಿ. ನಾಯರ್, ರಶ್ಮಿ ಕೆ, ಸಜಿತಾ ಎಂ, ಲತಾ ಪಿ. ಭಾಗವಹಿಸಿದರು.

You cannot copy contents of this page