ಕಾಸರಗೋಡು: ಚುನಾವಣೆಗೆ ಸಂಬಂಧಿಸಿ ಬಿಎಲ್‌ಒಗಳ ಮೂಲಕ ಮತದಾರರಿಗೆ ನೀಡುವ ಎನ್ಯುಮರೇಶನ್ ಫಾರ್ಮ್ ಮಲೆಯಾಳದಲ್ಲಿ ಮಾತ್ರವೇ ಮುದ್ರಣಗೊಂ ಡಿರುವುದು ಕನ್ನಡಿಗರ ಪ್ರತಿಭಟನೆಗೆ ಕಾರಣವಾಗಿದೆ. ಬಿಎಲ್‌ಒಗಳಿಗೆ ಗ್ರಾಮ ಕಚೇರಿಗಳಿಂದ ಎನ್ಯುಮರೇಶನ್ ಫಾರ್ಮ್ ವಿತರಣೆಯಾಗಿದ್ದು ಅದನ್ನು ಅವರು ಮತದಾರರ ಮನೆಗಳಿಗೆ ತಲುಪಿಸಬೇಕಾಗಿದೆ. ಆದರೆ ಎನ್ಯುಮರೇಶನ್ ಫಾರ್ಮ್ ಮಲೆಯಾಳದಲ್ಲಿ ಮಾತ್ರವೇ ಇರುವುದು ವಿವಾದಕ್ಕೆಡೆಮಾಡಿಕೊಟ್ಟಿದೆ. ಮಲೆಯಾಳ ತಿಳಿಯದ ಬಿಎಲ್‌ಒಗಳು ಹಾಗೂ ಕನ್ನಡಿಗ ರಾದ ಮತದಾರರಿಗೆ ಈ ಫಾರ್ಮ್‌ನಿಂದ ತೀವ್ರ ಸಮಸ್ಯೆ ಎದುರಾಗಿದೆ.
ಮಲಯಾಳದಲ್ಲಿರುವ ಫಾರ್ಮ್ ಭರ್ತಿಗೊಳಿಸಲು ಕನ್ನಡಿಗರಾದ ಮತದಾರರು ಪರದಾಡಬೇಕಾಗಿಬರಲಿದೆ. ಫಾರ್ಮ್ ಭರ್ತಿಗೊಳಿಸುವುದು ತಪ್ಪಿದಲ್ಲಿ ಮತದಾನದ ಹಕ್ಕು ಕಳೆದುಕೊಳ್ಳಬೇಕಾಗಿ ಬರಲಿದೆಯೆಂಬ ಆತಂಕ ಎದುರಾಗಿದೆ. ಮಲೆಯಾಳದ ಜತೆಗೆ ಆಂಗ್ಲ ಭಾಷೆಯಲ್ಲಾದರೂ ಫಾರ್ಮ್ ಮುದ್ರಿಸಬಹುದಾಗಿತ್ತು. ಆದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮುಂ ದಾಗದೆ ಕೇವಲ ಮಲೆಯಾಳಮ ಯಗೊಳಿಸುವ ನೀತಿ ಅನುಸರಿಸಿದ್ದಾರೆ ಎಂಬ ಆರೋಪವುಂಟಾಗಿದೆ. ಕಾಸರಗೋಡಿನಲ್ಲಿ ಮಲೆಯಾಳದ ಜತೆಗೆ ಕನ್ನಡದಲ್ಲೂ ಫಾರ್ಮ್, ಅರ್ಜಿಗಳನ್ನು ವಿತರಣೆ ಮಾಡುವುದಾಗಿ ಅಧಿಕಾರಿಗಳು ಒಂದೆಡೆ ಭರವಸೆ ನೀಡುತ್ತಿರುವಾಗ ಮತ್ತೊಂದೆಡೆ ಕನ್ನಡವನ್ನು ಕಡೆಗಣಿ ಸುತ್ತಿರುವುದು ಖಂಡನೀಯವಾ ಗಿದೆಯೆಂದು ಕಾಸರಗೋಡಿನ ಕನ್ನಡಿಗರು ವಾಟ್ಸಪ್ ಗ್ರೂಪ್‌ನ ಸಂಚಾಲಕ ಜಯನಾರಾಯಣ ತಾಯನ್ನೂರು ತಿಳಿಸಿದ್ದಾರೆ. ಇದನ್ನು ತೀವ್ರವಾಗಿ ವಿರೋಧಿಸು ವುದಾಗಿ ಜಯನಾರಾಯಣ ತಿಳಿಸಿದ್ದಾರೆ.







