ಸಾಕ್ಷ್ಯಬದಲಿಸಿದ ಪ್ರಕರಣ : ಕೇರಳದ ಶಾಸಕರು ಅನರ್ಹಗೊಳ್ಳುತ್ತಿರುವುದು ರಾಜ್ಯದ ಇತಿಹಾಸದಲ್ಲೇ ಇದು ಪ್ರಥಮ

ತಿರುವನಂತಪುರ: ಮಾದಕದ್ರವ್ಯ ಪ್ರಕರಣದ ಆರೋಪಿಯಾಗಿರುವ ವಿದೇಶಿ ಪ್ರಜೆಯನ್ನು ಶಿಕ್ಷೆಯಿಂದ ರಕ್ಷಿಸಲು ಸಾಕ್ಷ್ಯ ಬದಲಿಸಿದ ಪ್ರಕರಣದಲ್ಲಿ ತಿರುವನಂತಪುರ ಶಾಸಕರು ಹಾಗೂ ಮಾಜಿ ಸಾರಿಗೆ ಸಚಿವರೂ ಆಗಿರುವ  ಆಂಟನಿ ರಾಜು ಶಿಕ್ಷೆಗೊಳಗಾಗಿ ಅದರಿಂದಾಗಿ ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಂಡಿ ದ್ದು, ಹೀಗೆ ಶಾಸಕರೋರ್ವರು ಶಿಕ್ಷೆಗೊಳಗಾಗಿ ಆ ಸ್ಥಾನದಿಂದ ಅನರ್ಹಗೊಂಡಿರುವುದು ಕೇರಳದ  ರಾಜಕೀಯ ಇತಿಹಾಸದಲ್ಲೇ ಇದು ಪ್ರಥಮವಾಗಿದೆ.

1990 ಎಪ್ರಿಲ್ 4ರಂದು ಆಸ್ಟ್ರೇಲಿಯ ಪ್ರಜೆಯಾಗಿರುವ ಆಂಡ್ರೂ ಸಾಲ್ವಡಾರ್ ಎಂಬಾತನನ್ನು  ಮಾದಕದ್ರವ್ಯವಾದ 61 ಗ್ರಾಂ ಹ್ಯಾಶಿಶ್ ಆಯಿಲ್‌ನೊಂದಿಗೆ ತಿರುವನಂತಪುರ ವಿಮಾನ ನಿಲ್ದಾಣದಿಂದ ವಲಿಯತ್ತೂರು ಪೊಲೀಸರು ಬಂಧಿಸಿ ಆತನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದರು. ಮಾದಕದ್ರವ್ಯವನ್ನು ಆರೋಪಿ ಆತನ ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದನು. ಆತನನ್ನು ರಕ್ಷಿಸಲು ಅಂದು ಆತನ ಜ್ಯೂನಿಯರ್ ವಕೀಲನಾಗಿದ್ದ ಆಂಟನಿ ರಾಜು ಮತ್ತು ತಿರುವನಂತಪುರ ಜಿಲ್ಲಾ ನ್ಯಾಯಾಲಯದ ಕ್ಲರ್ಕ್ ಕೆ.ಎಸ್. ಜೋಸ್ ನ ಸಹಾಯದಂದಿಗೆ ನ್ಯಾಯಾಲಯದ ಕಸ್ಟಡಿಯಲ್ಲಿದ್ದ ಆರೋಪಿಯ ಒಳ ಉಡುಪನ್ನು ಕದ್ದು ಅದನ್ನು ಆರೋಪಿಗೆ ಹೊಂದಿಕೆಯಾಗದ ರೀತಿಯಲ್ಲಿ ಕತ್ತರಿಸಿ ಹೊಲಿದು ಸಣ್ಣದು ಮಾಡಿ ಅದನ್ನು ಮತ್ತೆ ನ್ಯಾಯಾಲಯದ ಪುರಾವೆಗಳ ಜೊತೆ ಇರಿಸಲಾಗಿತ್ತೆಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ತಿರುವನಂತಪುರ ಜಿಲ್ಲಾ ಸೆಶನ್ಸ್ ನ್ಯಾಯಾಲಯ, ಆರೋಪಿಯಾದ ಆಸ್ಟ್ರೇಲಿಯ ಪ್ರಜೆಗೆ ೧೦ ವರ್ಷ ಸಜೆ ಮತ್ತು ೧ ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿತ್ತು. ಆ ತೀರ್ಪಿನ ವಿರುದ್ಧ ಆರೋಪಿ ಸಲ್ಲಿಸಿದ ಮೇಲ್ಮನವಿಯನ್ನು ಪರಿಶೀಲಿಸಿದ ಹೈಕೋರ್ಟ್ ನಂತರ ಆತನನ್ನು ಖುಲಾಸೆಗೊಳಿಸಿ ತೀರ್ಪು ನೀಡಿತ್ತು.

1992ರಲ್ಲಿ ಭಾರತ ತೊರೆದ ಆರೋಪಿ ಆಸ್ಟ್ರೇಲಿಯದಲ್ಲಿ ಕೊಲೆ ಪ್ರಕರಣವೊಂದಕ್ಕೆ ಸಿಲುಕಿ ಅಲ್ಲಿನ ಜೈಲು ಸೇರಿದ್ದನು. ಆ ವೇಳೆ ತಾನು ಮಾದಕದ್ರವ್ಯ ಪ್ರಕರಣದಲ್ಲಿ ಸಿಲುಕಿಕೊಂಡಾಗ ತನ್ನನ್ನು  ರಕ್ಷಿಸಲು ತನ್ನ ವಕೀಲರಾಗಿದ್ದ ಆಂಟನಿ ರಾಜು ಮತ್ತು ನ್ಯಾಯಾಲಯದ ಕ್ಲರ್ಕ್ ತನಗೆ ಮಾಡಿದ ಸಹಾಯದ ಕುರಿತಾದ  ವಿಷಯವನ್ನು ಸಹ ಕೈದಿಗಳಲ್ಲಿ ತಿಳಿಸಿದ್ದನು. ಆ ವಿಷಯವನ್ನು  ಸಹ ಖೈದಿಗಳು ಆಸ್ಟ್ರೇಲಿಯಾದ ಜೈಲು ಅಧಿಕಾರಿಗಳಿಗೆ ಬಳಿಕ ತಿಳಿಸಿದ್ದರ. ತಕ್ಷಣ ಅಲ್ಲಿನ ಜೈಲು ಅಧಿಕಾರಿಗಳು ಕೇರಳ ಪೊಲೀಸರಿಗೆ ಆ  ಮಾಹಿತಿ ರವಾನಿಸಿದ್ದರು. ಇದು ಆಂಟನಿರಾಜು ಮತ್ತು ಕ್ಲರ್ಕ್‌ನನ್ನು ಸಾಕ್ಷ್ಯ ಬದಲಾಯಿಸಿದ ಪ್ರಕರಣದಲ್ಲಿ ಸಿಲುಕುವಂತೆ ಮಾಡಿತ್ತು. 1994ರಲ್ಲಿ ದಾಖಲುಗೊಂಡ ಈ ಪ್ರಕರಣದಲ್ಲಿ  19 ವರ್ಷದ ಬಳಿಕ ನೆಡುಮಂಙಾಡ್ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ ಆಂಟನಿ ರಾಜು ಮತ್ತು ಕ್ಲರ್ಕ್ ಜೋಸ್‌ಗೆ ತಲಾ ೩ ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಕ್ಲರ್ಕ್ ಜೋಸ್‌ನ್ನು ಒಂದನೇ ಆರೋಪಿ ಹಾಗೂ  ಆಂಟನಿ ಜೋಸ್‌ರನ್ನು ಎರಡನೇ ಆರೋಪಿಗಳನ್ನಾಗಿ ಒಳಪಡಿಸಲಾಗಿದೆ. ಶಿಕ್ಷೆ ವಿಧಿಸಿದ  ಬೆನ್ನಲ್ಲೇ ಈ ಇಬ್ಬರು ಆರೋಪಿಗಳಿಗೆ ಮೇಲ್ಮವಿ ಸಲ್ಲಿಸಲು ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆ. ಇದರಿಂದಾಗಿ ಸದ್ಯ ಆರೋಪಿಗಳು ಜೈಲು ಸೇರುವುದು ತಪ್ಪಿದಂತಾಗಿದೆ.  ಈ ತೀರ್ಪಿನ ವಿರುದ್ಧ ಶೀಘ್ರ ಮೇಲ್ಮನವಿ ಸಲ್ಲಿಸಲಾಗುವು ದೆಂದೂ ನನ್ನ ವಿರುದ್ಧ ದಾಖಲಿಸಲಾದ ಈ ಪ್ರಕರಣ ರಾಜಕೀಯ ಪ್ರೇರಿತ ಕಟ್ಟುಕತೆಯಾಗಿದೆಯೆಂದು ಆಂಟನಿ ರಾಜು ಹೇಳಿದ್ದಾರೆ.

RELATED NEWS

You cannot copy contents of this page