ಆಪರೇಷನ್ ತಂಡರ್’ ಶಾಲಾ ಪರಿಸರದ ಅಂಗಡಿಗಳಿಗೆ ಅಬಕಾರಿ ತಂಡದಿಂದ ಮಿಂಚಿನ ದಾಳಿ

ಕಾಸರಗೋಡು: ಹೊಸ ಶೈಕ್ಷಣಿಕ ವರ್ಷ ನಿನ್ನೆ ಆರಂಭಗೊಂಡಿರು ವಂತೆಯೇ ಶಾಲಾ ಪರಿಸರಗಳಲ್ಲಿ ನಿಷೇಧಿತ ತಂಬಾಕು ಉತ್ಪನ್ನ ಇತ್ಯಾದಿ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆಯೇ, ಎಂಬುದನ್ನು ಪತ್ತೆಹಚ್ಚಲು ‘ಆಪರೇಷನ್ ತಂಡರ್’ ಯೋಜನೆಯಂತೆ ಅಬಕಾರಿ ಇಲಾಖೆಯ ಗುಪ್ತಚರ ವಿಭಾಗದವರು ಜಿಲ್ಲೆಯ ಎಲ್ಲಾ ಶಾಲಾ ಪರಿಸರಗಳ ಅಂಗಡಿಗಳಿಗೆ ನಿನ್ನೆಯಿಂದ ದಾಳಿ ಮತ್ತು ತಪಾಸಣೆ ಆರಂಭಿಸಿದ್ದಾರೆ. ಇದರಂತೆ ಅಬಕಾರಿ ಗುಪ್ತಚರ ವಿಭಾಗದ ಇನ್ಸ್‌ಪೆಕ್ಟರ್ ಸುಬಿನ್‌ರಾಜ್ ನೇತೃತ್ವದ ಅಬಕಾರಿ ತಂಡ  ನಿನ್ನೆ ವ್ಯಾಪಕ ಕಾರ್ಯಾಚರಣೆ ನಡೆಸಿದರೂ, ಯಾವುದೇ ರೀತಿಯ ಅಮಲು ಪದಾರ್ಥಗಳು ಪತ್ತೆಯಾಗಲಿಲ್ಲ. ನೀಲೇಶ್ವರ ಅಬಕಾರಿ ರೇಂಜ್ ಕಚೇರಿಯ ವ್ಯಾಪ್ತಿಗೊಳಪಟ್ಟ ಪ್ರದೇಶದ ಶಾಲೆಗಳ ಪರಿಸರದ ಅಂಗಡಿಗಳಲ್ಲಿ ಇಂತಹ ಹೆಚ್ಚಿನ ತಪಾಸಣೆ ನಡೆಸಲಾಯಿತು.

ಮಾತ್ರವಲ್ಲ  ಅಬಕಾರಿ ತಂಡ ಶಾಲೆಗಳನ್ನೂ ಸಂದರ್ಶಿಸಿ, ಅಮಲು ಪದಾರ್ಥದ ವಿರುದ್ಧ ಶಾಲೆಗಳಲ್ಲಿ ರೂಪೀಕರಿಸಲಾಗಿರುವ ವಿಮುಕ್ತಿ ಸಮಿತಿಯ ಹೊಣೆಗಾರಿಕೆ ಹೊಂದಿರುವ ಅಧ್ಯಾಪಕರೊಂದಿಗೆ ಚರ್ಚೆಯನ್ನೂ ನಡೆಸಿತು. ಮಾತ್ರವಲ್ಲದೆ ಕೈಗೊಳ್ಳಬೇ ಕಾಗಿರುವ ಅಗತ್ಯದ ಮುಂಜಾಗ್ರತಾ ಕ್ರಮದ ಬಗ್ಗೆಯೂ ಮಾಹಿತಿ ನೀಡಲಾಯಿತು. ಗುಪ್ತಚರ ವಿಭಾಗದ ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ (ಗ್ರೇಡ್) ಮುರಳಿ ಕೆ.ವಿ, ನೀಲೇಶ್ವರ ರೇಂಜ್ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ರಾಜನ್ ಮತ್ತು ರಮ್ಯ ಮೊದ ಲಾದವರು ಈ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡರು. ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾ ಚರಣೆಯನ್ನು ಮುಂದುವರಿಸಲಾಗುವುದೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

RELATED NEWS

You cannot copy contents of this page