ಕಾಸರಗೋಡು: ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಹೆಸರಲ್ಲೂ ನಕಲಿ ಫೇಸ್ ಬುಕ್ ಖಾತೆ ತೆರೆದ ಬಗ್ಗೆ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಕಲಿ ಫೇಸ್ ಬುಕ್ ಖಾತೆ ಕಂಡಿರುವುದಾಗಿ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯೇ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಹೆಸರಲ್ಲಿ ಯಾರೋ ನಕಲಿ ಖಾತೆ ತೆರೆದಿರುವುದಾಗಿ ಜಿಲ್ಲಾಧಿಕಾರಿ ತನ್ನ ಅಧಿಕೃತ ಖಆತೆ ಮೂಲಕ ತಿಳಿಸಿದ್ದರು. ಈ ಪ್ರೊಫೈಲ್ ಯಾರೂ ಸ್ವೀಕರಿಸಕೂಡದೆಂದೂ ಅದನ್ನು ಬ್ಲಾಕ್ ಮಾಡಿ ಫೇಸ್ ಬುಕ್‌ನಲ್ಲಿ ವರದಿ ನೀಡಬೇಕೆಂದು ಜಿಲ್ಲಾಧಿಕಾರಿ ಸಾರ್ವಜನಿಕರೊಂದಿಗೆ ವಿನಂತಿಸಿದ್ದಾರೆ.
ಇತ್ತೀಚೆಗಿನಿಂದ ನಕಲಿ ಫೇಸ್ ಬುಕ್ ಖಾತೆಗಳ ಮೂಲಕ ನಡೆಯುವ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚಿದೆಯೆಂದು ಪೊಲೀಸರು ತಿಳಿಸುತ್ತಿದ್ದಾರೆ. ಈ ನಕಲಿ ಖಾತೆಗಳನ್ನು ತೆರೆದು ಆ ಮೂಲಕ ಸ್ನೇಹಿತರಲ್ಲಿ ಹಣ ಕೇಳುವುದು ಸಹಿತ ವಿವಿಧ ರೀತಿಯಲ್ಲಿ ವಂಚನೆ ನಡೆಯುತ್ತಿದೆ. ಆದ್ದರಿಂದ ಫ್ರೆಂಡ್ಸ್ ರಿಕ್ವೈಸ್ಟ್ ಸ್ವೀಕರಿಸುವ ಮುಂಚೆ ಅವು ನಕಲಿ ಅಲ್ಲವೆಂಬುವುದನ್ನು ಖಾತರಿಪಡಿಸಬೇಕೆಂದೂ ಸೈಬರ್ ಪೊಲೀಸರು ತಿಳಿಸಿದ್ದಾರೆ.