ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕುಸಿತ: 4090 ಅಧ್ಯಾಪಕರು ಹೊರಕ್ಕೆ

ಕಾಸರಗೋಡು: ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಯಲ್ಲಿ ಗಣನೀಯ ಕುಸಿತವುಂಟಾಗಿದ್ದು, ಇದರ ಪರಿಣಾಮವಾಗಿ ರಾಜ್ಯದ ವಿವಿಧ ಶಾಲೆಗಳಲ್ಲಾಗಿ 4090 ಅಧ್ಯಾಪಕ ಹುದ್ದೆಗಳು ಇಲ್ಲದಾಗಿವೆ. ಮಾತ್ರವಲ್ಲ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಪರಿಗಣಿಸುವ ವಿಷಯದಲ್ಲೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಉಂಟಾಗಿರುವ ಲೋಪ ದೋಷಗಳಲ್ಲಿ ಹಲವು ಅಧ್ಯಾಪಕ ಹುದ್ದೆಗಳು ನಷ್ಟಹೊಂದಲು ಇನ್ನೊಂದು ಪ್ರಧಾನ ಕಾರಣವಾಗಿ ದೆಯೆಂದು ಹೇಳಲಾಗುತ್ತಿದೆ.

ಈ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಸಾರ್ವಜನಿಕ ಶಿಕ್ಷಣ ವಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 1.25 ಲಕ್ಷದಷ್ಟು ಕುಸಿತ ಉಂಟಾಗಿದೆ. ಇದರಂತೆ ಸರಕಾರಿ ಶಾಲೆಗಳಲ್ಲಿ 66,315 ಮತ್ತು ಅನುದಾನಿತ ಶಾಲೆಗಳಲ್ಲಿ 59,371 ರಷ್ಟು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕುಸಿತ ಉಂಟಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ 2.34 ಲಕ್ಷ ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆದಿ ದ್ದಾರೆ. ಇದರಲ್ಲಿ 57,130 ಮಕ್ಕಳು ಆಧಾರ್ ಕಾರ್ಡ್ ಹೊಂದಿಲ್ಲವೆಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ.

ಹೀಗೆ ಆಧಾರ್ ಕಾರ್ಡ್ ಹೊಂದದ ವಿದ್ಯಾರ್ಥಿಗಳ ಪೈಕಿ ಕಾಸರಗೋಡು ಜಿಲ್ಲೆಯ 3843 ವಿದ್ಯಾ ರ್ಥಿಗಳು ಒಳಗೊಂಡಿದ್ದಾರೆಂದು ಲೆಕ್ಕಾಚಾರಗಳು ಸೂಚಿಸುತ್ತಿವೆ.

You cannot copy contents of this page