ಬಾಯಾರು: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಬಾಯಾರಿನಲ್ಲಿರುವ ಕುಟುಂಬ ಆರೋಗ್ಯ ಕೇಂದ್ರದ ನೂತನ ಕಟ್ಟಡ 2023ರಲ್ಲಿ ಪೂರ್ಣಗೊಂಡರೂ ಇದು ವರೆಗೆ ಉದ್ಘಾಟನೆಗೊಳ್ಳದ ಕಾರಣ ಉಪಯೋಗಕ್ಕಿಲ್ಲದಂತಾಗಿದೆ. ಕಟ್ಟಡದ ಒಳಗಿರುವ ಪೀಠೋಪಕರಣಗಳು ನಾಶವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಬಾಯಾರು ಸೊಸೈಟಿ ಹತ್ತಿರದಿಂದ ಮೆರವಣಿಗೆ ಮೂಲಕ ಸಾಗಿ ಬಿಜೆಪಿ ಕಟ್ಟಡದ ಅಣಕು ಉದ್ಘಾಟನೆ ಮಾಡುವ ಮೂಲಕ ಪ್ರತಿಭಟಿಸಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಬಿಜೆಪಿ ಪೈವಳಿಕೆ ಪಂಚಾಯತ್ ಸಮಿತಿ ವಿನಂತಿಸಿದೆ.
