ಕುಟುಂಬ ಸಮಸ್ಯೆ: ಪತ್ನಿಯ ಮೇಲೆ ಹಲ್ಲೆ ನಡೆಸಿದ ಪತಿಯ ವಿರುದ್ಧ ನರಹತ್ಯಾಯತ್ನ ಪ್ರಕರಣ ದಾಖಲು

ಕುಂಬಳೆ: ಪತ್ನಿಯ ಮೇಲೆ ಹಲ್ಲೆ ನಡೆಸಿದ ದೂರಿನಂತೆ ಪತಿಯ ವಿರುದ್ಧ ಕುಂಬಳೆ ಪೊಲೀಸರು ನರಹತ್ಯಾಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಬ್ರಾಣ ಮೂಸ ಕ್ವಾರ್ಟರ್ಸ್‌ನ ಶಮೀಮ ಎಸ್. (32) ಎಂಬಾಕೆ ಈ ಬಗ್ಗೆ ದೂರು ನೀಡಿದ್ದು, ಅದರಂತೆ ಅಕೆಯ ಪತಿ ಕಾಸರಗೋಡಿನ ಮುಹಮ್ಮದ್ ಆಸಿಫ್ ಎಂಬಾತನ ವಿರುದ್ಧ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನ್ನ ಮಗಳನ್ನು ಆರೋಪಿಯ ಜತೆ ಕಳುಹಿಸಿಕೊಡಲು ಒಪ್ಪದ ದ್ವೇಷದಿಂದ ತಾನು ದುಡಿಯುತ್ತಿರುವ ಪೆಟ್ರೋಲ್ ಬಂಕ್‌ಗೆ ಅಕ್ಟೋಬರ್ ೨೦ರಂದು ಅಪರಾಹ್ನ ಆರೋಪಿ ಬಂದು ತನ್ನ ಮೇಲೆ ಹಲ್ಲೆ ನಡೆಸಿ ಕುತ್ತಿಗೆ ಹಿಚುಕಿದ್ದನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶಮೀಮ ಆರೋಪಿಸಿದ್ದಾಳೆ. ಆಕೆಯ ಕುತ್ತಿಗೆ ಹಿಚುಕಲೆತ್ನಿಸಿದನೆಂದೂ ಆ ವೇಳೆ ಅಲ್ಲಿದ್ದ  ಜನರು ಆರೋಪಿಯನ್ನು ಹಿಡಿದು ಹಿಂದಕ್ಕೆ ಸರಿಸಿದ್ದರು. ಅದಕ್ಕೆ ಸಂಬಂಧಿಸಿ ಆರೋಪಿಯ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page