ಮಲಪ್ಪುರಂ: ಕೌಟುಂಬಿಕ ವಿವಾದದಿಂದ ಸಹೋದರನೋರ್ವ ತಮ್ಮನನ್ನು ಇರಿದು ಕೊಲೆಗೈದ ಘಟನೆ ಪೂಕೋಟೂರು ಪಳ್ಳಿಮುಖ್ ಎಂಬಲ್ಲಿ ನಡೆದಿದೆ. ಇಲ್ಲಿನ ಅಮೀರ್ (26) ಸಾವಿಗೀಡಾದ ವ್ಯಕ್ತಿ. ಘಟನೆಗೆ ಸಂಬಂಧಿಸಿ ಸಹೋದರ ಜುನೈದ್ (28)ನನ್ನು ಮಂಜೇರಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇಂದು ಮುಂಜಾನೆ 5 ಗಂಟೆ ವೇಳೆ ಈ ಭೀಕರ ಕೊಲೆಕೃತ್ಯ ನಡೆದಿದೆ. ಮನೆಯಲ್ಲಿ ಇವರಿಬ್ಬರು ಮಾತ್ರವೇ ಇದ್ದರು. ಇವರ ಮಧ್ಯೆ ವಾಗ್ವಾದವುಂಟಾಗಿದ್ದು, ಈ ಮಧ್ಯೆ ಜುನೈದ್ ಚಾಕುವಿನಿಂದ ಇರಿದು ಅಮೀರ್‌ನನ್ನು ಕೊಲೆಗೈದಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಆರ್ಥಿಕ ಸಮಸ್ಯೆಗಳು ವಾಗ್ವಾದಕ್ಕೆ ಹಾಗೂ ಕೊಲೆಗೆ ಕಾರ ಣವಾಗಿದೆಯೆಂದು ಹೇಳಲಾಗುತ್ತಿದೆ. ಕೊಲೆಯ ಬಳಿಕ ಜುನೈದ್ ಪೊಲೀಸ್ ಠಾಣೆಗೆ ತಲುಪಿ ಶರಣಾಗಿದ್ದಾನೆ.






