ಕೃಷಿಕ ನಿಧನ

ಮುಳ್ಳೇರಿಯ: ಉತ್ತಮ ಕೃಷಿಕ ರಾಗಿದ್ದ ಆದೂರು ಕಾನಕ್ಕೋಡ್ ನಿವಾಸಿ ಪದ್ಮನಾಭ ರೈ (60) ನಿಧನ ಹೊಂದಿದರು. ಹೈನುಗಾರಿಕೆ ಯಲ್ಲಿಯೂ ತೊಡಗಿಸಿಕೊಂಡಿದ್ದ ಇವರು ಧಾರ್ಮಿಕ ರಂಗದಲ್ಲಿಯೂ ಸಕ್ರಿಯರಾಗಿ ದುಡಿಯುತ್ತಿದ್ದರು. ಕಾನಕ್ಕೋಡು ವನಶಾಸ್ತಾರ ಕ್ಷೇತ್ರದ ಸೇವಾ ಸಮಿತಿ ಪ್ರಧಾನ ಕಾರ್ಯ ದರ್ಶಿಯಾಗಿದ್ದರು. ದಿ| ಅಕ್ಕಾರಿ ರೈ- ದಿ| ರಾಧ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಉಷಾ, ಪುತ್ರಿ ಕೀರ್ತಿ, ಸಹೋದರರಾದ ಕೋಚಣ್ಣ ರೈ (ನಿವೃತ್ತ ವಿಜಯಬ್ಯಾಂಕ್ ಸೀನಿ ಯರ್ ಮೆನೇಜರ್), ಡಾ| ಶೇಷಪ್ಪ ರೈ (ನಿವೃತ್ತ ಪ್ರೊಫೆಸರ್), ಹರಿನಾಥ ರೈ (ನಿವೃತ್ತ ಸೈನಿಕ), ವಿಠಲ ರೈ, ಸಹೋದರಿಯರಾದ ಸುಹಾಸಿನಿ ಎಂ. ಮಾರ್ಲ, ಪುಷ್ಪಾ ಎಂ. ಹೆಗ್ಡೆ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

You cannot copy contents of this page