ಉಪ್ಪಳ: ಕುಬಣೂರು ಪಂಜ ನಿವಾಸಿ ಹಿರಿಯ ಕೃಷಿಕ ಬಾಬು ಶೆಟ್ಟಿ (67) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರು ಈ ಹಿಂದೆ ಸುಮಾರು 25 ವರ್ಷಗಳ ಕಾಲ ದುಬೈಯಲ್ಲಿ ಟೈಲರ್ ಆಗಿದ್ದರು. ಮೃತರು ಮಕ್ಕಳಾದ ಪ್ರಿಯಾಂಕ, ವಿನಯರಾಜ್, ಅಳಿಯ, ಸೊಸೆ, ಸಹೋದರ ಸಂಜೀವ ಶೆಟ್ಟಿ ಮುಂಬಯಿ, ಸಹೋದರಿಯರಾದ ಪದ್ಮಾವತಿ, ಸುಮತಿ, ಲಲಿತ, ವಸಂತಿ, ವಿಶಾಲ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪತ್ನಿ ವಿಶಾಲ ಈ ಹಿಂದೆ ನಿಧನ ಹೊಂದಿದ್ದಾರೆ.







