ಮಗನನ್ನು ಕಾಣಲು ಬಸ್ಸಿನಲ್ಲಿ ಬೆಂಗಳೂರಿಗೆ ಹೊರಟ ತಂದೆ ಪ್ರಯಾಣ ಮಧ್ಯೆ ಸಾವು

ಕಾಸರಗೋಡು: ಮಗನನ್ನು ಕಾಣಲೆಂದು ಬೆಂಗಳೂರಿಗೆ ಹೊರಟ ತಂದೆ ಪ್ರಯಾಣ ಮಧ್ಯೆ ಬಸ್ಸಿನಲ್ಲಿ ಹೃದಯಾಘಾತಕ್ಕೊಳಗಾಗಿ  ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.

ನಗರದ ಅಣಂಗೂರು ಸರಕಾರಿ ಆಯುರ್ವೇದ ಆಸ್ಪತ್ರೆ ಬಳಿಯ ಸುನಿತಾ ನಿವಾಸದ ಕೆ.ಕೆ. ಅಶೋಕನ್ (73) ಸಾವನ್ನಪ್ಪಿದ ವ್ಯಕ್ತಿ. ಇವರು ಖಾಸಗಿ ಬಸ್ಸಿನಲ್ಲಿ ಗುರುವಾರ ರಾತ್ರಿ ಕಾಸರಗೋಡಿ ನಿಂದ ಬೆಂಗಳೂರಿಗೆ ಪ್ರಯಾಣಿಸಿದ್ದು ಹಾಸನ ತಲುಪಿದಾಗ ಅವರಿಗೆ ಹೃದಯಾಘಾತವುಂಟಾಗಿದೆ. ತಕ್ಷಣ ಅವರನ್ನು ಹಾಸನದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ಮೃತದೇಹವನ್ನು  ಕಾಸರಗೋ ಡಿಗೆ ತಂದು ಅಂತ್ಯಕ್ರಿಯೆ ನಡೆಸಲಾ ಯಿತು. ಮೃತ ಅಶೋಕನ್‌ರ ಪತ್ನಿ ಸುನಿತಾ  ಈ ಹಿಂದೆ ನಿಧನಹೊಂ ದಿದ್ದಾರೆ. ಇವರು ಮಕ್ಕಳಾದ ಅನು (ಯುಕೆ), ಅಮೃತ್ (ಇಂಜಿನಿಯರ್ ಬೆಂಗಳೂರು), ಸೊಸೆ ಸುಬೀನಾ, ಸಹೋದರ-ಸಹೋ ದರಿಯರಾದ ರವೀಂದ್ರನಾಥ್, ಅನಶ್ರೀಯಾ, ಪುರುಷೋತ್ತಮನ್, ನಾಗೇಶ್, ಭಾರತಿ, ವಿಜಯಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page