ಕೊಚ್ಚಿ: ಮಹಿಳಾ ಡಾಕ್ಟರ್ ವಾಸ ಸ್ಥಳದಲ್ಲಿ ಮೃತಪಟ್ಟಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಆಲುವಾ ರಾಜಗಿರಿ ಆಸ್ಪತ್ರೆಯ ಡಾಕ್ಟರ್ ಮೀನಾಕ್ಷಿ ವಿಜಯ ಕುಮಾರ್ ಮೃತಪಟ್ಟವರು. ರಾಜಗಿರಿ ಆಸ್ಪತ್ರೆಯ ಸರ್ಜಿಕಲ್ ಐಸಿಯುನಲ್ಲಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು. ಕುನ್ನುವಳಿಯಲ್ಲಿ ರುವ ಫ್ಲ್ಯಾಟ್‌ನಲ್ಲಿ ಇವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ಬೆಳಿಗ್ಗೆ ಆಸ್ಪತ್ರೆಯಿಂದ ಫೋನ್ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಬಳಿಕ ಆಸ್ಪತ್ರೆ ಅಧಿಕಾರಿಗಳು ಫ್ಲ್ಯಾಟ್‌ನಲ್ಲಿರು ವವರಿಗೆ ಮಾಹಿತಿ ನೀಡಿದ್ದು, ಅವರು ಬಂದು ನೋಡಿದಾಗ ಡಾಕ್ಟರ್ ಮಲಗುವ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಇವರ ಕೈಗೆ ಸಿರಿಂಜ್ ಚುಚ್ಚಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯಾಗಿರಬೇಕೆಂದು ಶಂಕಿಸಲಾಗಿದೆ.
