ಪುತ್ತಿಗೆ: ಪುತ್ತಿಗೆ ಡಿವಿಶನ್‌ನಲ್ಲಿ ಕಳೆದ ಬಾರಿ ಬಿಜೆಪಿಯ ನಾರಾಯಣ ನಾಯ್ಕ್ ಜಯ ಗಳಿಸಿದ್ದು, ಸಿಪಿಎಂನ ವಿ. ವಿಜಯ ಕುಮಾರ್ ದ್ವಿತೀಯ ಸ್ಥಾನದಲ್ಲಿದ್ದರು. 17,647 ಮತ ಗಳಿಸಿ ಬಿಜೆಪಿ ಜಯ ಗಳಿಸಿದರೆ ಸಿಪಿಎಂಗೆ 16,445 ಮತಗಳು ಲಭಿಸಿತ್ತು. ಇದೇ ವೇಳೆ ಕಾಂಗ್ರೆಸ್‌ನ ಗೋವಿಂದ ನಾಯ್ಕ್‌ರಿಗೆ 11,201 ಮತ ಲಭಿಸಿತ್ತು. ಈ ಬಾರಿ ಇಲ್ಲಿ ತೀವ್ರ ಸ್ಪರ್ಧೆಯೊಡ್ಡಿ ಡಿವಿಶನ್‌ನ್ನು ಬಿಜೆಪಿ ಕೈಯಿಂದ ವಶಪಡಿಸಲು ಕಾಂಗ್ರೆಸ್‌ನ ಪ್ರಮುಖ ಮುಖಂಡ ಸೋಮಶೇಖರ್ ಜೆ.ಎಸ್. ಸ್ಪರ್ಧಿಸುತ್ತಿದ್ದಾರೆ. ಜೊತೆಗೆ ಸಿಪಿಎಂನ ಕಾಸರಗೋಡು ಏರಿಯ ಮಾಜಿ ಕಾರ್ಯದರ್ಶಿ ಪ್ರಸ್ತುತ ಜಿಲ್ಲಾ ಸಮಿತಿ ಸದಸ್ಯನಾಗಿರುವ ಚೆರ್ಕಳ ಪಾಣಲಂ ನಿವಾಸಿ ಕೆ.ಎ. ಮುಹಮ್ಮದ್ ಹನೀಫ್ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯ ಸ್ಥಾನ ಉಳಿಸಿಕೊಳ್ಳಲು ಪೈವಳಿಕೆ ಪಂಚಾಯತ್ ಅಧ್ಯಕ್ಷನಾಗಿದ್ದ ಪ್ರಸ್ತುತ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷನಾಗಿರುವ ಮಣಿಕಂಠ ರೈಯನ್ನು ಬಿಜೆಪಿ ಕಣಕ್ಕಿಳಿಸಿದೆ. ಈ ಮೂವರು ಸ್ಪರ್ಧಿಗಳಲ್ಲಿ ಜಯ ಯಾರ ಬಗಲಿಗೆ ನೀಡಬೇಕು ಎಂಬುದನ್ನು ಮತದಾರರು ನಿರ್ಣಯಿಸಲಿದ್ದಾರೆ.
ಸತತವಾಗಿ ಎರಡು ಬಾರಿ ಇಲ್ಲಿ ಬಿಜೆಪಿಗೆ ಜಯಗಳಿಸಲು ಸಾಧ್ಯವಾಗಿದೆ. ವಾರ್ಡ್ ವಿಭಜನೆ ಹಿನ್ನೆಲೆಯಲ್ಲಿ ಕೆಲವು ವಾರ್ಡ್‌ಗಳು ಅತ್ತಿತ್ತ ಬದಲಾವಣೆ ಗೊಂಡ ಹಿನ್ನೆಲೆಯಲ್ಲಿ ಈ ಬಾರಿಯ ಫಲಿತಾಂಶದಲ್ಲಿಯೂ ಬದಲಾವಣೆ ಉಂಟಾಗಲಿದೆ ಎಂದು ಪಕ್ಷಗಳು ನಿರೀ ಕ್ಷಿಸಿವೆ. ಮೂರು ಪಕ್ಷಗಳ ಅಭ್ಯರ್ಥಿಗಳು ರಾಜಕೀಯಾತೀತವಾಗಿ ಮತದಾರರ ಮಧ್ಯೆ ಅತ್ಯಂತ ಪರಿಚಿತ ಮುಖಗಳಾ ಗಿವೆ ಎಂಬುದು ಈ ಬಾರಿಯ ವಿಶೇಷತೆ ಯಾಗಿದೆ. ಪ್ರಸ್ತುತ ಇದ್ದ ಮಂಜೇಶ್ವರ ಬ್ಲೋಕ್‌ನ ಮುಳಿಗದ್ದೆ ಡಿವಿಶನ್ ವರ್ಕಾಡಿ ಜಿಲ್ಲಾ ಪಂಚಾಯತ್ ಡಿವಿಶನ್‌ಗೆ ಸೇರಿಸಲಾಗಿದ್ದು, ಅದಕ್ಕೆ ಬದಲಾಗಿ ಚೇವಾರು ಡಿವಿಶನ್‌ನ್ನು ಪುತ್ತಿಗೆಗೆ ಹೊಸತಾಗಿ ಸೇರಿಸಲಾಗಿದೆ. ಎಣ್ಮಕಜೆ, ಪುತ್ತಿಗೆ ಪಂಚಾಯತ್‌ಗಳ ಎಲ್ಲಾ ವಾರ್ಡ್‌ಗಳು, ಪೈವಳಿಕೆ ಪಂಚಾಯತ್‌ನ 11 ವಾರ್ಡ್‌ಗಳು ಈ ಡಿವಿಶನ್‌ನಲ್ಲಿದೆ. ಎಣ್ಮಕಜೆ ಐಕ್ಯರಂಗದ ಸ್ವಾಧೀನದಲ್ಲೂ, ಪುತ್ತಿಗೆಯಲ್ಲಿ ಎಲ್‌ಡಿಎಫ್ ಆಡಳಿತ ದಲ್ಲಿದೆ. ಮಂಜೇಶ್ವರ ಬ್ಲೋಕ್‌ನ ಚೇವಾರು, ಪೆರ್ಮುದೆ, ಎಣ್ಮಕಜೆ, ಪೆರ್ಲ ಡಿವಿಶನ್‌ಗಳು ಜಿಲ್ಲಾ ಪಂಚಾಯತ್‌ನ ಪುತ್ತಿಗೆ ಡಿವಿಶನ್‌ನಲ್ಲಿದೆ. ಇಲ್ಲಿನ ಒಟ್ಟು ಜನಸಂಖ್ಯೆ 67,300 ಆಗಿದೆ. ಬಿಜೆಪಿ ಜಯಗಳಿಸುವುದಕ್ಕಿಂತ ಮುಂಚಿತ ಎಡರಂಗದ ಕೈಯಲ್ಲಿದ್ದ ಈ ಡಿವಿಶನ್‌ನಲ್ಲಿ ಪ್ರಸ್ತುತ ತ್ರಿಕೋನ ಸ್ಪರ್ಧೆ ಕಂಡು ಬರುತ್ತಿದೆ.
ಐಕ್ಯರಂಗಕ್ಕೆ ಆಡಳಿತ ಲಭಿಸುವುದಾದರೆ ಅಧ್ಯಕ್ಷ ಸ್ಥಾನಕ್ಕಾಗಿ ಆಯ್ಕೆ ಮಾಡುವ ಮುಖಂಡರಲ್ಲಿ ಪುತ್ತಿಗೆ ಪಂಚಾಯತ್‌ನ ಐಕ್ಯರಂಗದ ಅಭ್ಯರ್ಥಿ ಶೇಣಿ ನಿವಾಸಿ, ಎಣ್ಮಕಜೆ ಪಂ. ಅಧ್ಯಕ್ಷ ಸೋಮಶೇಖರ ಜೆ.ಎಸ್. ಕೂಡಾ ಅರ್ಹರು ಎಂಬುದು ಇಲ್ಲಿನ ವಿಶೇಷತೆಯಾಗಿದೆ. ಬಿಜೆಪಿಯಿಂದ ಸ್ಪರ್ಧಿಸುವ ಮಣಿಕಂಠ ರೈ ಪೈವಳಿಕೆ ಪಟ್ಲ ಪೆರುವೋಡಿ ನಿವಾಸಿಯಾಗಿದ್ದಾರೆ.







