ಎಡನೀರು: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನದ ಶ್ರೀ ಎಡನೀರು ಮಠದಲ್ಲಿ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಪಂಚಮ ವಾರ್ಷಿಕ ಆರಾಧನೆ ನಾಳೆ ನಡೆಯಲಿದೆ. ಬೆಳಿಗ್ಗೆ 6.30ರಿಂದ ಮಹಾಪೂಜೆ, ೯ಕ್ಕೆ ಧ್ವಜಾರೋಹಣ, ಕಜಂಪಾಡಿ ಶ್ರೀ ಸುಬ್ರಹ್ಮಣ್ಯ ಭಟ್‌ರಿಂದ ಆಶಯ ಭಾಷಣ, 9.30ರಿಂದ ವೀಣಾವಾದನ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ವೃಂದಾವನ ಪೂಜೆ, 2 ಗಂಟೆಗೆ ಮಂತ್ರಾಕ್ಷತೆ, ೨.೩೦ರಿಂದ ಆರಾಧನೋತ್ಸವ ಮಹಾಪೂಜೆ ನಡೆಯಲಿದೆ. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು. ಕರ್ನಾಟಕದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮುಖ್ಯ ಅಭ್ಯಾಗತರಾಗಿರುವರು. ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶಾಮ್ ಭಟ್ ಗೌರವ ಉಪಸ್ಥಿತರಿರುವರು. ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಮನೋಹರ್ ಅವರು ಗುರುಸ್ಮರಣೆ ಮಾಡುವರು. ಸಾಮಾಜಿಕ ಧುರೀಣ ಕೃಷ್ಣ ಬಾಬಾ ಪೈ ಅವರಿಗೆ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಗೌರವ ಪ್ರದಾನ ಮಾಡಲಾಗುವುದು. ಸಂಜೆ ೫ರಿಂದ ಬಡಗುತಿಟ್ಟು ಯಕ್ಷಗಾನ ಬಯಲಾಟ, ರಾತ್ರಿ 9ರಿಂದ 10.30ರ ವರೆಗೆ ತೆಂಕುತಿಟ್ಟು ಯಕ್ಷಗಾನ ಬಯಲಾಟ ನಡೆಯಲಿದೆ.
