ಕಾಸರಗೋಡು: ಕಾಞಂಗಾಡ್ ರಾವಣೇಶ್ವರದಲ್ಲಿ ಇಬ್ಬರು ಸಹೋದರರ ಮಧ್ಯೆ ನಡೆದ ಜಗಳದ ವೇಳೆ ಓರ್ವನಿಗೆ ಗಂಭೀರ ಇರಿತ ಉಂಟಾಗಿದೆ. ರಾವಣೇಶ್ವರ ಪಾಣಂ ತೋಡು ನಿವಾಸಿ ಶಾಜಿ (45) ಇರಿತದಿಂದ ಗಂಭೀರ ಗಾಯಗೊಂ ಡಿದ್ದು, ಇವರನ್ನು ಕಲ್ಲಿಕೋಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಅಪರಾಹ್ನ ಶಾಜಿ ಹಾಗೂ ಸಹೋದರ ಶೈಜು ಮಧ್ಯೆ ವಾಗ್ವಾದ ನಡೆದಿದ್ದು, ಇದು ಬಳಿಕ ಹೊಕೈಗೆ ತಲುಪಿದೆ. ಈ ವೇಳೆ ಮದ್ಯದಮಲಿ ನಲ್ಲಿದ್ದ ಶೈಜು ಅಣ್ಣ ಶಾಜಿಗೆ ಇರಿದು ಗಾಯಗೊಳಿಸಿರುವುದಾಗಿ ಹೇಳಲಾಗುತ್ತಿದೆ. ತಕ್ಷಣ ಶಾಜಿಯನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಸ್ಥಿತಿ ಗಂಭೀರವಾಗಿರುವು ದರಿಂದ ಬಳಿಕ ಕಲ್ಲಿಕೋಟೆ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಶೈಜುವನ್ನು ಹೊಸದುರ್ಗ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.





