ಅಂತಿಮ ಮತದಾರ ಯಾದಿ ಪ್ರಕಟ: ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ; 2.83 ಕೋಟಿ ಮತದಾರರು

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾ ವಣೆಯ ಅಂತಿಮ ಮತದಾರ ಯಾದಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಇದರಲ್ಲಿ 2,83,12,472 (2.83 ಕೋಟಿ) ಮತದಾರರು ಒಳಗೊಂಡಿದ್ದಾರೆ.

ಜುಲೈ 23ರಂದು ಪ್ರಕಟಿಸಲಾದ ಕರಡು ಮತದಾರ ಯಾದಿಯಲ್ಲಿ ಇದ್ದ ಸಂಖ್ಯೆಗಿಂತ ಅಂತಿಮ ಮತದಾರ ಯಾದಿಯಲ್ಲಿ 16,34,216 ರಷ್ಟು ಹೆಚ್ಚಳ ಉಂಟಾಗಿದೆ. ಮತದಾರ ಯಾದಿ ರಾಜ್ಯ ಚುನಾವಣಾ ಆಯೋಗದ ವೆಬ್ ಸೈಟ್, ಆಯಾ ಸ್ಥಳೀಯಾಡಳಿತ ಸಂ ಸ್ಥೆಗಳು, ತಾಲೂಕು ಮತ್ತು ಗ್ರಾಮ ಕಚೇರಿಗಳಲ್ಲಿ ಪರಿಶೀಲನೆಗೆ ಲಭಿಸುವುದು.

RELATED NEWS

You cannot copy contents of this page