ತಿರುವನಂತಪುರ: ಸ್ಥಳೀಯಾಡಳತ ಚುನಾವಣೆಗಿರುವ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಇಂದು ಪ್ರಕಟಿಸಲಿದೆ. ಕಳೆದ ತಿಂಗಳ 30ರಂದು ಪ್ರಕಟಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದವರಿಂದ ಮಾಹಿತಿ ಸಂಗ್ರಹಕ್ಕೆ 29ರ ವರೆಗೆ ಸಮಯ ನೀಡಿದ ಹಿನ್ನೆಲೆಯಲ್ಲಿ ಪಟ್ಟಿ ಬಿಡುಗಡೆ ಇಂದಿಗೆ ಮುಂದೂಡಲಾಗಿತ್ತು.
