ಮುಳ್ಳೇರಿಯ: ಕಾರಡ್ಕ ಪಂಚಾಯತ್ನ ಉಯಿತ್ತಡ್ಕದಲ್ಲಿ ಕಸಾಯಿಖಾನೆಯ ತ್ಯಾಜ್ಯದಿಂದಾಗಿ ದುರ್ವಾಸನೆ ಇದೆ ಎಂಬ ದೂರಿನಂತೆ ತಪಾಸಣೆ ನಡೆಸಿದಾಗ ತ್ಯಾಜ್ಯವನ್ನು ಸ್ವಂತ ಹಿತ್ತಿಲಲ್ಲಿ ಅವೈಜ್ಞಾನಿಕವಾಗಿ ಉಪೇಕ್ಷಿ ಸಿರುವುದನ್ನು ಪತ್ತೆಹಚ್ಚಲಾಗಿದೆ. ಇದಕ್ಕಾಗಿ ಸ್ಥಳದ ಮಾಲಕನಿಗೆ 15,000 ರೂ. ದಂಡ ಹೇರಿ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲು ನಿರ್ದೇಶಿಸಲಾಗಿದೆ. ಸಂಸ್ಥೆ ಹಾಗೂ ಪರಿಸರವನ್ನು ಶುಚಿಯಾಗಿರಿಸ ದಿರುವುದಕ್ಕೆ ಅಡೂರಿನ ಜನರಲ್ ಸ್ಟೋರ್, ಗ್ರೋಸರಿ, ಅಣಂಗೂರಿನ ಮಾರ್ಟ್, ಹೋಟೆಲ್, ಕ್ವಾರ್ಟರ್ಸ್, ಪುಲ್ಲೂರಿನ ಸೂಪರ್ ಮಾರ್ಕೆಟ್, ಬೇಕರಿ, ವಿದ್ಯಾನಗರ ಅಪಾರ್ಟ್ಮೆಂಟ್ ಎಂಬೀ ಸಂಸ್ಥೆಗಳ ಮಾಲಕರಿಗೆ 22,000 ರೂ. ದಂಡ ಹೇರಲಾಗಿದೆ. ತಪಾಸಣೆಗೆ ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್ಫೋ ರ್ಸ್ ಮೆಂಟ್ ಸ್ಕ್ವಾಡ್ ಲೀಡರ್ ಕೆ.ವಿ. ಮುಹಮ್ಮದ್ ಮದನಿ, ಟಿ.ಸಿ. ಶೈಲೇಶ್, ಪೋಲ್, ಪಿ. ಜಯಶ್ರೀ, ಪಿ. ಶಾರದ, ಬಿ.ಕೆ. ದೀಪ ನೇತೃತ್ವ ನೀಡಿದರು.
