ತಿರುವನಂತಪುರ: ಸಾರಿಗೆ ಕಾನೂನನ್ನು ಉಲ್ಲಂಘಿಸಿಬಾಗಿಲು ಗಳನ್ನು ತೆರೆದು ಸೇವೆ ನಡೆಸಿದ 4099 ಬಸ್‌ಗಳಿಂದಾಗಿ ಒಟ್ಟು 12,69,750 ರೂ.ವನ್ನು ಜುಲ್ಮಾನೆ ರೂಪದಲ್ಲಿ ವಸೂಲಿ ಮಾಡಲಾಗಿದೆ. ಬಾಗಿಲುಗಳನ್ನು ತೆರೆದಿರಿಸಿ ಸೇವೆ ನಡೆಸುತ್ತಿರುವ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳುವ ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರ ರಸ್ತೆ ಸುರಕ್ಷತಾ ಮ್ಯಾನೇಜ್‌ಮೆಂಟ್ ಐಜಿಯವರ ನೇತೃತ್ವದಲ್ಲಿ ರಾಜ್ಯದಾದ್ಯಂತವಾಗಿ ಒಂದು ವಾರ ನಡೆಸಲಾದ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯಲ್ಲಿ ಈ ಜುಲ್ಮಾನೆ ವಸೂಲಿ ಮಾಡಲಾಗಿದೆ.
ಬಸ್‌ಗಳು ಬಾಗಿಲುಗಳನ್ನು ತೆರೆದಿರಿಸಿ ಸೇವೆ ನಡೆಸಿದಲ್ಲಿ ಕೆಲವೊಮ್ಮೆ ಪ್ರಯಾಣಿಕರು ನಿಯಂತ್ರಣ ತಪ್ಪಿ ರಸ್ತೆಗೆ ಬೀಳುವ ಮತ್ತು ಅದರಿಂದ ಗಂಭೀರ ಗಾಯ ಉಂಟಾಗುವ ಸಾಧ್ಯತೆಯನ್ನು ಪರಿಗಣಿಸಿ ಅದನ್ನು ತಡೆಗಟ್ಟಲು ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಪ್ರತ್ಯೇಕ ಪ್ರತ್ಯೇಕ ಕಾರ್ಯಾಚರಣೆ ಆರಂಭಿಸಿದೆ.
ಬಸ್‌ಗಳು ಸೇವೆ ನಡೆಸುವ ವೇಳೆ ಅವುಗಳ ದಿಢೀರ್ ಬ್ರೇಕ್ ಹಾಕುವಿಕೆ, ತೀವ್ರ ತಿರುವು ಇರುವ ಸ್ಥಳಗಳಲ್ಲಿ ಬಸ್‌ಗಳನ್ನು ತಿರುಗಿಸು ವಾಗ ಪ್ರಯಾಣಿಕರು ಈ ಬಸ್‌ನ ಬಾಗಿಲ ಮೂಲಕ ಹೊರಬೀಳುವು ದನ್ನು ತಡೆಗಟ್ಟುವುದು ಇಂತಹ ಕಾರ್ಯಾಚರಣೆಯ ಪ್ರಧಾನ ಉದ್ದೇಶವಾಗಿದೆ. ಇದರ ಹೊರತಾಗಿ ಬಸ್‌ಗಳ ಬಾಗಿಲುಳಿಗೆ ಸರಿಯಾದ ರೀತಿಯಲ್ಲಿ ಬಾಗಿಲುಗಳನ್ನು ಅಳವಡಿಸಲಾಗಿ ದೆಯೇ ಎಂಬುದನ್ನು ಖಾತರಿಪ ಡಿಸುವ ಪರಿಶೀಲನೆಯನ್ನು ಸಾರಿಗೆ ಇಲಾಖೆ ಇನ್ನೊಂದೆಡೆ ನಡೆಸತೊಡಗಿದೆ.