ಪಂದಳಂ: ಶಬರಿಮಲೆ ದೇಗುಲದಿಂದ ಚಿನ್ನ ಕದ್ದ ಪ್ರಕರಣದಲ್ಲಿ 2019ರ ತಿರುವಿದಾಂಕೂರ್ ದೇವಸ್ವಂ ಮಂಡಳಿಯ ವಿರುದ್ಧವೂ ಈ ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಇದರಿಂದಾಗಿ ಅಂದು ಮುಜರಾಯಿ ಮಂಡಳಿ ಅಧ್ಯಕ್ಷರಾಗಿದ್ದ ಸಿಪಿಎಂ ನೇತಾರ ಎ. ಪದ್ಮಕುಮಾರ್ ಹಾಗೂ ಮಂಡಳಿ ಸದಸ್ಯರಾಗಿದ್ದ ಸಿಪಿಎಂ ಪ್ರತಿನಿಧಿಗಳಾದ ಕೆ.ಪಿ. ಶಂಕರ್‌ದಾಸ್ ಮತ್ತು ಎನ್. ವಿಜಯ್ ಕುಮಾರ್ ಕೂಡಾ ಈ ಪ್ರಕರಣದಲ್ಲಿ ಸಿಲುಕಿಕೊಳ್ಳುವಂತಾಗಿದೆ. ಆದರೆ ಎಫ್‌ಐಆರ್‌ನಲ್ಲಿ ಇವರ ಹೆಸರನ್ನು ನೇರವಾಗಿ ಉಲ್ಲೇಖಿಸಲಾಗಿಲ್ಲ. ಚಿನ್ನ ಕದ್ದು ಸಾಗಿಸಿದ ಪ್ರಕರಣದಲ್ಲಿ 2019ರ ದೇವಸ್ವಂ ಮಂಡಳಿಯ ಆಡಳಿತ ಸಮಿತಿಯನ್ನು ೮ನೇ ಆರೋಪಿಯನ್ನಾಗಿ ಒಳಪಡಿಸಲಾಗಿದೆ. ರಾಜಕೀಯ ನೇತಾರರು ಮಾತ್ರ ಒಳಗೊಂಡ ದೇವಸ್ವಂ ಮಂಡಳಿ ಆರೋಪಿ ಸ್ಥಾನದಲ್ಲಿರುವುದರಿಂದಾಗಿ ಅದು ರಾಜ್ಯ ಸರಕಾರ ಮತ್ತು ಎಡರಂಗವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ.
ಚಿನ್ನ ಕದ್ದ ಪ್ರಕರಣದಲ್ಲಿ ಪ್ರಾಯೊ ಜಕ ಉಣ್ಣಿಕೃಷ್ಣನ್ ಪೋತ್ತಿಯನ್ನು ಒಂದನೇ ಆರೋಪಿ ಹಾಗೂ ಮಂಡಳಿಯ 9 ಮಂದಿಯನ್ನು ಇತರ ಆರೋಪಿಗ ಳನ್ನಾಗಿ ಸೇರ್ಪಡೆಗೊಳಿ ಲಾಗಿದೆ. ಕಳವು, ದರೋಡೆ, ಒಳಸಂಚು ಹೂಡುವಿಕೆ, ನಂಬುಗೆದ್ರೋಹ ಎಂಬೀ ಸೆಕ್ಷನ್‌ಗಳ ಪ್ರಕಾರ ಇವರ ವಿರುದ್ಧ ಕೇಸು ದಾಖಲಿಸಲಾಗಿದೆ. ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳ ಕವಚವನ್ನು ಅದರಿಂದ ಕಳಚಿ ತೆಗೆಯುವ ವೇಳೆ ಅದರಲ್ಲಿ ೪೨.೨ ಕಿಲೋ ಚಿನ್ನ ವಿತ್ತು. ಅದನ್ನು ಪುನಃ ಚಿನ್ನದ ಲೇಪನ ನಡೆಸುವ ಚೆನ್ನೈಯ ಸ್ಮಾರ್ಟ್ ಕ್ರಿಯೇಶನ್ಸ್ ಎಂಬ ಸಂಸ್ಥೆಗೆ ಸಾಗಿಸಿದಾಗ ಅದರ ಚಿನ್ನದ ತೂಕ 32.2 ಕಿಲೋಗೆ ಇಳಿದಿತ್ತೆಂದೂ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಈ ದ್ವಾರಪಾಲಕ ಮೂರ್ತಿಗಳ ಕವಚಗಳಿಗೆ ಲೇಪನಗೊಳಿಸುವ ಚಿನ್ನವನ್ನು ಕರ್ನಾಟಕದ ಚಿನ್ನದಂಗಡಿ ಯೊಂದರ ಮಾಲಕ ಗೋವರ್ಧನ್ ಎಂಬವರ ಮೂಲಕ ಪ್ರಾಯೋಜಕ ಉಣ್ಣಿಕೃಷ್ಣನ್ ಪೋತ್ತಿ ಚೆನ್ನೈಯ ಸ್ಮಾರ್ಟ್ ಕ್ರಿಯೇಶನ್ ಸಂಸ್ಥೆಗೆ ನೀಡಿದ್ದನೆಂಬುವುದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿರುವ ಉಣ್ಣಿಕೃಷ್ಣನ್‌ಪೋತ್ತಿ ಮತ್ತು ಇತರರನ್ನು ತನಿಖಾ ತಂಡ ವಿಚಾರಣೆಗೊಳಪಡಿಸತೊಡಗಿದೆ. ಅದರಿಂದ ಇವರು ಶೀಘ್ರ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ಈ ಪ್ರಕರಣದ ಬಗ್ಗೆ ಎನ್‌ಪೋರ್ಸ್ ಮೆಂಟ್ ಡೈರೆಕ್ಟರೇಟ್ (ಇಡಿ) ಸಮಾನಾಂತರ ತನಿಖೆ ಆರಂಭಿಸಿದೆ. ಇದರಿಂದ ಇಡಿ ತಂಡ ಈಗಾಗಲೇ ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ಅಗತ್ಯದ ಮಾಹಿತಿಗಳನ್ನು ಸಂಗ್ರಹಿಸಿದೆ. ಹೆಚ್ಚಿನ ತನಿಖೆಗಾಗಿ ಇಡಿ ತಂಡ ಶಬರಿಮಲೆಗೆ ಆಗಮಿಸಿ ತನಿಖೆ ಮುಂದುವರಿಸಲಿದೆ.