ಆಡನ್ನು ರಕ್ಷಿಸಲು ಬಾವಿಗಿಳಿದ ಯುವಕನನ್ನು ಮೇಲಕ್ಕೆತ್ತಿದ ಅಗ್ನಿಶಾಮಕ ದಳ

ಕಾಸರಗೋಡು: ಆಡನ್ನು ರಕ್ಷಿಸಲು ೫೦ ಅಡಿ ಆಳದ ಬಾವಿಗೆ ಇಳಿದ ಯುವಕ ಬಳಿಕ ಮೇಲಕ್ಕೇರಲಾಗದೆ ಸಿಲುಕಿಕೊಂಡ ಘಟನೆ ನಡೆದಿದೆ. ಬಳಿಕ ಅಗ್ನಿಶಾಮಕ ದಳ ತಲುಪಿ ಆತನನ್ನು ಮೇಲಕ್ಕೆತ್ತಿ ರಕ್ಷಿಸಿದೆ. ನಿನ್ನೆ ಸಂಜೆ ಮುಳಿಯಾರು ಮಾಸ್ತಿಕುಂಡ್ ನಿವಾಸಿ ಮುಸ್ತಫ ಎಂಬವರ ಮನೆ ಬಳಿಯ ಬಾವಿಗೆ ಆಡು ಬಿದ್ದಿತ್ತು. ಅದನ್ನು ರಕ್ಷಿಸಲೆಂದು ನೆರೆಮನೆ ನಿವಾಸಿಯಾದ ಅಶ್ರಫ್ (45) ಬಾವಿಗೆ ಇಳಿದಿದ್ದರು. ಆದರೆ ಬಳಿಕ ಅವರಿಗೆ ಮೇಲಕ್ಕೇರಲು ಸಾಧ್ಯವಾಗಲಿಲ್ಲ. ಈ ವಿಷಯ ತಿಳಿದ  ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿದೆ.  ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಗಳಾದ ಬಿ.ಎಸ್. ಸುಬಿಲ್ ಬಾವಿಗಿಳಿದು ಬಲೆಯ ಸಹಾಯದಿಂದ ಅಶ್ರಫ್‌ರನ್ನು ಮೇಲಕ್ಕೆ ತಲುಪಿಸಲಾಯಿತು. ಈ ವೇಳೆ ತೀವ್ರ ಅಸ್ವಸ್ಥಗೊಂಡಿದ್ದ ಅಶ್ರಫ್‌ರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.

ಇದೇ ವೇಳೆ ಬಾವಿಗೆ ಬಿದ್ದ ಆಡು ಸಾವಿಗೀಡಾಗಿತ್ತು. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್‌ಗಳಾದ ರಂಜಿತ್, ಎಸ್. ಅಭಿಲಾಷ್, ಕೆ.ವಿ. ಹರಿ ಕುಮಾರ್, ಚಾಲಕ ಶಬಿಲ್, ಹೋಂಗಾರ್ಡ್ ಶೈಲೇಶ್ ಹಾಗೂ ನಾಗರಿಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

RELATED NEWS

You cannot copy contents of this page