ಮನೆ ಶೆಡ್‌ಗೆ ಬೆಂಕಿ: ನಾಶ, ನಷ್ಟ

ಕಾಸರಗೋಡು: ಮನೆಗೆ ತಾಗಿಕೊಂಡು ನಿರ್ಮಿಸಲಾಗಿರುವ ಶೆಡ್‌ಗೆ ಬೆಂಕಿ ತಗಲಿ ವ್ಯಾಪಕ ನಾಶನಷ್ಟ ಉಂಟಾಗಿದೆ. ಕೀಯೂರು ಮಠದ ಕೆ.ಎ. ಮುಹಮ್ಮದ್ ಕುಂಞಿ ಎಂಬವರ ಮನೆ ಪಕ್ಕದ ಶೆಡ್‌ಗೆ ನಿನ್ನೆ ರಾತ್ರಿ ಸುಮಾರು 9.15ರ ವೇಳೆಗೆ ಬೆಂಕಿ ತಗಲಿಕೊಂಡಿದೆ. ಅದರೊಳಗೆ ಸಂಗ್ರಹಿಸಿಡಲಾಗಿದ್ದ ಕಟ್ಟಿಗೆಗಳು, ತೆಂಗಿನಕಾಯಿ ಸಿಪ್ಪೆ   ಸೇರಿದಂತೆ ಶೆಡ್ ಪೂರ್ಣವಾಗಿ  ಬೆಂಕಿಗಾಹುತಿಯಾ ಗಿದೆ. ಮನೆಯ ಅಡುಗೆ ಕೊಠಡಿ ಬಳಿಯಿಂದ ಶೆಡ್‌ಗೆ ಬೆಂಕಿ ತಗಲಿಕೊಂಡಿ ರಬಹುದೆಂದು ಶಂಕಿಸಲಾಗುತ್ತಿದೆ.   ಸಂಬಂಧಿಕ ರೋರ್ವರು ನಿನ್ನೆ ನಿಧನಹೊಂದಿದ್ದು ಅದರಿಂದಾಗಿ ಈ ಮನೆಯವರು ಅಲ್ಲಿಗೆ ಹೋಗಿದ್ದರು. ಆ ವೇಳೆ ಬೆಂಕಿ ಅನಾಹುತ ಸಂಭವಿಸಿದೆ. ಬೆಂಕಿ ತಗಲಿರುವುದನ್ನು ಕಂಡ ನೆರೆಮನೆಯವರು ನೀಡಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎಂ. ಸತೀಶನ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದೆ. ಈ ತಂಡದಲ್ಲಿ ಅಗ್ನಿಶಾಮಕದಳದ ಇತರ ಸಿಬ್ಬಂದಿಗಳಾದ ಉಮೇಶನ್, ಅಭಿಲಾಶ್, ಅಭಯ್‌ಸೇನ್, ಪ್ರಜಿತ್, ಅನುಶ್ರೀ, ಮತ್ತು ಹೋಂಗಾರ್ಡ್ ಶೈಲೇಶ್ ಎಂಬವರು ಒಳಗೊಂಡಿದ್ದರು.

You cannot copy contents of this page