ಪೇರಾಲ್ ಕಣ್ಣೂರಿನಲ್ಲಿ ವಾಚನಾಲಯಕ್ಕೆ ಪಟಾಕಿ ಎಸೆತ; ತಂಡದಿಂದ ವ್ಯಕ್ತಿಗೆ ಹಲ್ಲೆ

ಕುಂಬಳೆ: ಪೇರಾಲ್ ಕಣ್ಣೂರಿನಲ್ಲಿ ಇ.ಕೆ. ನಾಯನಾರ್ ವಾಚನಾಲಯದ ಮೇಲೆ ಪಟಾಕಿ ಎಸೆದು ಹಾನಿಗೈದ ಪ್ರಕರಣದಲ್ಲಿ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ. ಶನಿವಾರ ಸಂಜೆ ಯುಡಿಎಫ್ ಕಾರ್ಯಕರ್ತರ ತಂಡ ಈ ಕೃತ್ಯವೆಸಗಿರುವುದಾಗಿ ಸಿಪಿಎಂ ಆರೋಪಿಸಿದೆ. ವಾಚನಾಲಯಕ್ಕೆ ಪಟಾಕಿ ಎಸೆದು ಬಳಿಕ ಫ್ಲೆಕ್ಸ್ ಬೋರ್ಡ್‌ಗಳನ್ನು ನಾಶಗೊಳಿಸಲಾಗಿದೆ. ಅಲ್ಲದೆ ವಾಚನಾಲಯದ ಮುಂದೆ ನಿಂತಿದ್ದ ಹಸೈನಾರ್ ಕೋರಿತ್ತಳ (52) ಎಂಬವರಿಗೂ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಹಸೈನಾರ್ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆ ಬಗ್ಗೆ ಸಿಪಿಎಂ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.

RELATED NEWS

You cannot copy contents of this page