ಕಾಸರಗೋಡು: ತೆಂಗಿನಕಾಯಿ ಕೊಯ್ಯಲೆಂದು ಯಂತ್ರದ ಸಹಾಯ ದಿಂದ ಮೇಲೇರಿದ ಕಾರ್ಮಿಕ ಅಲ್ಲಿಂದ ಇಳಿಯಲು ಸಾಧ್ಯವಾಗದೆ ಅಲ್ಲೇ ಸಿಲುಕಿಕೊಂಡಿದ್ದು ನಂತರ ಅಗ್ನಿಶಾಮಕ ದಳ ಆಗಮಿಸಿ ಅವರನ್ನು ಮರದಿಂದ ಸುರಕ್ಷಿತವಾಗಿ ಕೆಳಗಿಳಿಸಿ ರಕ್ಷಿಸಿದ ಘಟನೆ ನಡೆದಿದೆ.
ಉದುಮ ಸಮೀಪದ ಕುಳಕುನ್ನಿನ ಎ.ಜೆ. ರಾಜು (60) ಎಂಬವರು ನಿನ್ನೆ ಕುಳಕುನ್ನಿನ ಫೌಸಿಯಾ ಉಸ್ಮಾನ್ ಎಂಬವರ ಹಿತ್ತಿಲಲ್ಲಿರುವ ತೆಂಗಿನ ಮರಕ್ಕೆ ಯಂತ್ರದ ಸಹಾಯದಿಂದ ಹತ್ತಿ ದ್ದರು. ಆ ವೇಳೆ ಯಂತ್ರ ದಿಢೀರ ಕೈಕೊಟ್ಟಿದೆ. ಇದರಿಂದ ಮರದಿಂದ ಕೆಳಕ್ಕಿಳಿಯಲು ಸಾಧ್ಯವಾಗದೆ ಅವರು ಅಲ್ಲೇ ಸಿಲುಕಿಕೊಂಡರು.
ಈ ಬಗ್ಗೆ ಮಾಹಿತಿ ಲಭಿಸಿದ ಸ್ಟೇಶನ್ ಆಫೀಸರ್ ಕೆ. ಹರ್ಷರ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ ಸ್ಥಳಕ್ಕಾಗಮಿಸಿ ಏಣಿ ಸಹಾಯದಿಂದ ರಾಜುರನ್ನು ಸುರಕ್ಷಿತವಾಗಿ ಮರದಿಂದ ಕೆಳಗಿಳಿಸಿ ದರು. ರಕ್ಷಣಾ ಕಾರ್ಯಾಚರಣೆ ಯಲ್ಲಿ ಅಗ್ನಿಶಾಮಕದಳದ ಸಿಬ್ಬಂದಿಗಳಾದ ಆರ್. ವಿನೋದ್ ಕುಮಾರ್, ವಿ.ಎಸ್. ವೇಣುಗೋಪಾಲ್, ಒ.ಕೆ. ಪ್ರಜಿತ್, ಎಸ್. ಅರುಣ್ ಕುಮಾರ್, ಜಿತಿನ್ ಕೃಷ್ಣನ್, ಪಿ.ಸಿ. ಮೊಹಮ್ಮದ್ ಸಿರಾಜುದ್ದೀನ್, ವಿ.ಎಸ್. ಗೋಕುಲ್‌ಕೃಷ್ಣನ್, ಅತುಲ್‌ರವಿ, ಒ.ಕೆ. ಅನುಶ್ರೀ ಎನ್.ಪಿ. ರಾಕೇಶ್, ಕೆ.ವಿ. ಶ್ರೀಜಿತ್ ಮತ್ತು ಎಸ್. ಸೋಬಿನ್ ಎಂಬವರು ಒಳಗೊಂಡಿದ್ದರು.







