ಕೊಳಚೆ ಹೊಂಡಕ್ಕೆ ಬಿದ್ದ ಗರ್ಭಿಣಿ ಹಸುವಿನ ಪ್ರಾಣ ರಕ್ಷಿಸಿದ ಅಗ್ನಿಶಾಮಕದಳ

ನೀರ್ಚಾಲು: ಹುಲ್ಲು ಮೇಯುತ್ತಿದ್ದ ವೇಳೆ ಗರ್ಭಿಣಿ ಹಸುವೊಂದು   ಕೊಳಚೆ ಹೊಂಡಕ್ಕೆ ಬಿದ್ದಿದ್ದು ಅಗ್ನಿಶಾಮಕದಳ ಮೇಲಕ್ಕೆತ್ತಿ ಅದರ ಪ್ರಾಣ ರಕ್ಷಿಸಿದ ಘಟನೆ ನಿನ್ನೆ ಬೇಳದಲ್ಲಿ ನಡೆದಿದೆ.  ಬೇಳದ  ಅಬ್ದುಲ್ ಖಾದರ್ ಎಂಬವರ ಹಿತ್ತಿಲಲ್ಲಿರುವ  ಸುಮಾರು 6 ಅಡಿ ಆಳದ ಕೊಳಚೆ ಹೊಂಡಕ್ಕೆ ಗರ್ಭಿಣಿ ಹಸು  ನಿನ್ನೆ   ಜಾರಿ ಬಿದ್ದಿದೆ. ಅದನ್ನು ಮೇಲಕ್ಕೆತ್ತಲು ಸ್ಥಳೀಯರು ಭಾರೀ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಊರವರು ನೀಡಿದ ಮಾಹಿತಿಯಂತೆ ಅಸಿಸ್ಟೆಂಟ್ ಸ್ಟೇಶನ್ ಆಫೀಸರ್ ಆರ್. ವಿನೋದ್ ಕುಮಾರ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಲುಪಿ  ಕ್ಯಾನ್‌ವಾಸ್ ಹೋಸ್ ಮತ್ತು ಹಗ್ಗದ ಸಹಾಯದಿಂದ ಹಸುವನ್ನು ಮೇಲಕ್ಕೆತ್ತಿ ಪ್ರಾಣ ರಕ್ಷಿಸಿದರು. ಅಗ್ನಿಶಾಮಕದಳ ಸಿಬ್ಬಂದಿಗಳಾದ ಎಸ್.ಅರುಣ್ ಕುಮಾರ್, ಜೆ.ಬಿ. ಜಿಜೋ, ವೈಶಾಖ್ ಪಾರ್ಥಸಾರಥಿ, ಎಂ.ಎಂ. ಅರುಣ್ ಕುಮಾರ್, ಜೆ. ಅನಂತು, ಅರುಣಾ ಪಿ. ನಾಯರ್, ಹೋಂಗಾರ್ಡ್ ಗಳಾದ ಬಿ. ರಾಜು, ಸುರೇಶ್ ಎಂಬಿವರು ರಕ್ಷಣಾ ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.

You cannot copy contents of this page