ಕುಂಬಳೆ: ಕಾರು ಢಿಕ್ಕಿ ಹೊಡೆದು ಮೀನು ಮಾರಾಟಗಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬಂದ್ಯೋಡು ಅಡ್ಕದ ಸಲೀಂ (46) ಎಂಬವರು ಗಾಯಗೊಂಡಿದ್ದು, ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರು ಸ್ಕೂಟರ್ನಲ್ಲಿ ಮೀನು ಕೊಂಡೊಯ್ದು ಮಾರಾಟ ನಡೆಸುತ್ತಿದ್ದಾರೆ.
ಇದರಂತೆ ನಿನ್ನೆಯೂ ಮೀನು ಸಾಗಾಟ ನಡೆಸುತ್ತಿದ್ದಾಗ ಆಗಮಿಸಿದ ಕಾರು ಇವರಿಗೆ ಢಿಕ್ಕಿ ಹೊಡೆದಿದೆ. ಕಾರು ಅಪರಿಮಿತ ವೇಗದಲ್ಲಿ ಸಂಚರಿಸುತ್ತಿತ್ತೆಂದು ಪ್ರತ್ಯಕ್ಷದರ್ಶಿಗಳು ತಿಳಿಸುತ್ತಿದ್ದಾರೆ. ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸಲೀಂರನ್ನು ಅದೇ ಕಾರಿನಲ್ಲಿ ಆಸ್ಪತ್ರೆಗೆ ತಲುಪಿಸಿರುವು ದಾಗಿಯೂ ತಿಳಿಸಲಾಗಿದೆ.







