ಮುಹಿಮ್ಮಾತ್ ಅಹ್ದಲ್ ಉರೂಸ್‌ಗೆ ಧ್ವಜಾರೋಹಣ

ಪುತ್ತಿಗೆ: ಮುಹಿಮ್ಮಾತ್ ಸ್ಥಾಪಕ ಸಯ್ಯೀದ್ ತ್ವಾಹಿರುಲ್ ಅಹ್ದಲ್ ತಂಙಳ್‌ರ 21ನೇ ಉರೂಸ್‌ಗೆ ಧ್ವಜಾ ರೋಹಣ ನಡೆಸಲಾಯಿತು. ಈ ತಿಂಗಳ 31ರವರೆಗೆ ನಡೆಯುವ  ಕಾರ್ಯ ಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸು ವರು. ಸ್ವಾಗತಸಮಿತಿ ಅಧ್ಯಕ್ಷ ಸೈನುಲ್ ಆಬಿದಿನ್ ತಂಙಳ್ ಎಣ್ಮೂರು ಧ್ವಜಾ ರೋಹಣಗೈದರು. ಬಿ.ಎಸ್. ಅಬ್ದುಲ್ಲ ಕುಂಞಿ ಫೈಸಿ, ಮೂಸಲ್ ಮದನಿ ತಲಕ್ಕಿ, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಮುಹ್ಮದ್ ಅಬೀಬ್ ಅಹ್ದಲ್ ತಂಙಳ್, ಮುನಿರುಲ್ ಅಹ್ದಲ್ ತಂಙಳ್ ಸಹಿತ ಹಲವರು ಭಾಗವಹಿ ಸಿದರು. ಖದಮುಲ್ ಅಹ್ದಲಿಯ ಸದಸ್ಯರ ನೇತೃತ್ವದಲ್ಲಿ ಬೈಕ್ ರ‍್ಯಾಲಿ ನಡೆಸಲಾ ಯಿತು. ಮುಗು ರೋಡ್‌ನಿಂದ ಆರಂಭ ಗೊಂಡ ಗಂಡುರ ಜಾಥಾದಲ್ಲಿ ನೂರಾರು ಮಂದಿ ಭಾಗವಹಿಸಿದರು. ಬಳಿಕ ನಡೆದ ತ್ವಾಹಿರುಲ್ ಅಹ್ದಲ್ ಮಖಾಂ ಸಮೂಹ ಸಿಯಾರತ್‌ಗೆ ಅಬ್ದುಲ್ ಅಸೀಸ್ ಹೈದ್ರೂಸಿ ತಂಙಳ್, ಖತ್ಮುಲ್ ಕುರಾನ್ ಮಜ್ಲೀಸ್‌ಗೆ ಮೊಹಮ್ಮದ್ ಪೂಕುಂಞಿ ತಂಙಳ್ ಕಲ್ಲಕಟ್ಟ ನೇತೃತ್ವ ನೀಡಿದರು. ಪಳ್ಳಂಗೋಡು ಅಬ್ದುಲ್ ಖಾದರ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮ್ಮೇಳನದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯ ಸಅದುಲ್ ಉಲಮ ಕೆ.ಪಿ. ಅಬ್ದುಲ್ ಮುಸ್ಲಿಯಾರ್ ಮಾಣಿಕ್ಕೋತ್ ಉದ್ಘಾಟನೆ ನಿರ್ವಹಿಸಿ ದರು. ಮಶೂದ್ ತಂಙಳ್ ಪುರ ಪ್ರಾರ್ಥನೆ ನಡೆಸಿದರು. ಹಲವರು ಭಾಗವಹಿಸಿದರು. ಇಂದು ಬೆಳಿಗ್ಗೆ ಹಜ್ ಅಧ್ಯಯನ ತರಗತಿ ನಡೆಯಿತು. ಸಂಜೆ 7 ಗಂಟೆಗೆ ಸ್ವಲಾತ್ ಮಜ್ಲಿಸ್ ನಡೆಯಲಿದೆ.

You cannot copy contents of this page