ಮಂಜೇಶ್ವರ: ಉತ್ತರ ಕೇರಳದ ಪ್ರಸಿದ್ಧ ಉದ್ಯಾವರ ಸಾವಿರ ಜಮಾಯತ್‌ನಲ್ಲಿ ಉದಯಾಸ್ತಮಾನ ಉರೂಸ್ ಇಂದಿನಿಂದ ಆರಂಭಗೊ ಳ್ಳುವುದಾಗಿ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ದರ್ಗಾ ಸಮಿತಿ ಅಧ್ಯಕ್ಷ ಪೂಕುಂಞಿ ತಂಙಳ್ ಉದ್ಯಾವರ ಧ್ವಜಾರೋಹಣಗೈಯ್ಯುವರು. ಈ ತಿಂಗಳ 25ರಂದು ರಾತ್ರಿ 8.30ಕ್ಕೆ ಕಾಂತಾಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸುವರು. ಉರೂಸ್ ಸಮಿತಿ ಗೌರವಾಧ್ಯಕ್ಷ ಎಂ.ಎ. ಅತಾವುಲ್ಲ ತಂಙಳ್ ಅಧ್ಯಕ್ಷತೆ ವಹಿಸುವರು. ಆ ದಿನ ನಡೆಯುವ ಮಜ್ಲಿಸ್‌ಗೆ ಇಬ್ರಾಹಿಂ ಖಲೀಲುಲ್ ಮುಖಾರಿ ಕಡಲುಂಡಿ ತಂಙಳ್ ನೇತೃತ್ವ ನೀಡುವರು. ಫಾರೂಕ್ ನಇಮಿ ಮದ್‌ಹು ರಸೂಲ್ ಪ್ರವಚನ ನೀಡುವರು. 28ರಂದು ಬೆಳಿಗ್ಗೆ 9ರಿಂದ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ.
ಜನವರಿ 3ರಂದು ಸಂಜೆ 3 ಗಂಟೆಗೆ ನಡೆಯುವ ಮಾನವ ಸೌಹಾರ್ದ ಸಂಗಮದಲ್ಲಿ ವಿವಿಧ ವಲಯಗಳ ಗಣ್ಯರು ಭಾಗವಹಿಸುವರು. 28ರಂದು ರಾತ್ರಿ ದಿಕ್ರ್ ಮಜ್ಲಿಸ್‌ಗೆ ಶಿಹಾಬುದ್ದಿನ್ ಅಲ್ ಹೈದ್ರೋಸಿ ಕಲ್ಲರಗಳ್ ತಂಙಳ್ ನೇತೃತ್ವ ನೀಡುವರು. 29ರಂದು ನಡೆಯುವ ಗ್ರಾಂಡ್ ಬುರ್ದಾ ಮಜ್ಲಿಸ್‌ಗೆ ತ್ವಾಹ ತಂಙಳ್ ಸಹಿತ ಅಂತಾರಾಷ್ಟ್ರೀಯ ರಂಗದ ಪ್ರಸಿದ್ಧರು ಭಾಗವಹಿಸುವರು. ಅಲಿ ತಂಙಲ್ ಕುಂಬೋಳ್, ಶಹೀರ್ ಅಲ್ ಬುಖಾರಿ ಮಳ್ಹರ್, ಜಲಾಲುದ್ದೀನ್ ಅಲ್ ಬುಖಾರಿ, ಅಬೂಬಕ್ಕರ್ ಮೌಲಾನಾ ತಂಙಳ್ ಹಮೀದ್ ತಂಙಳ್, ಹಾಮಿದ್ ಮಸ್ಬಾಹಿ ತಂಙಳ್, ಜಲಾಲುದ್ದೀನ್ ಅಲ್ ಹಾದಿ ಉಜಿರೆ ತಂಙಳ್, ಹಾಮಿದ್ ಕೋಯಮ್ಮ ಅಲ್ ಜಲಾಲಿ ತಂಙಳ್ ಮೊದಲಾದವರು ವಿವಿಧ ದಿನಗಳಲ್ಲಿ ಭಾಗವಹಿಸುವರು. ಜನವರಿ 3ರಂದು ರಾತ್ರಿ 8.30೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಸಮಸ್ತ ಕೇರಳ ಜಂಇಯತ್ತುಲ್ ಉಲಮಾ ಅಧ್ಯಕ್ಷ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸುವರು. ಅಂದು ನಡೆಯುವ ಪ್ರಾರ್ಥನಾ ಮಜ್ಲಿಸ್‌ಗೆ ಸುಹೈಲ್ ಸಖಾಫ್ ತಂಙಳ್ ಮಡಕ್ಕರ ನೇತೃತ್ವ ನೀಡುವರು. ಕುಮ್ಮನಂ ನಿಸಾಮುದ್ದೀನ್ ಅಸ್‌ಹರಿ ಪ್ರಧಾನ ಭಾಷಣ ಮಾಡುವರು. ಈ ಬಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಉರೂಸ್ ಸಮಿತಿಯ ಪದಾಧಿಕಾರಿಗಳಾದ ಯು.ಕೆ. ಸೈಫುಲ್ಲಾ ತಂಙಳ್ ಅಲ್‌ಬುಖಾರಿ, ಇಬ್ರಾಹಿಂ, ಪಳ್ಳಿಕುಂಞಿ ಹಾಜಿ, ಇಬ್ರಾಹಿಂ ಫೈಸಿ, ಖಾದರ್ ಫಾರೂಕ್, ಅಹಮ್ಮದ್ ಬಾವಾ ಹಾಜಿ, ಅಲಿ ಕುಟ್ಟಿ, ಮುಕ್ತಾರ್ ಎ, ಶರೀಫ್ ಉದ್ಯಾವರ್, ಹೊಸೂರ್ ರಹ್ಮಾನ್ ಹಾಜಿ,ಮೂಸ ಯು, ಎಸ್.ಎಂ. ಬಶೀರ್ ಭಾಗವಹಿಸಿದರು.






