ಕಾಸರಗೋಡು: ಸಾಮಾಜಿಕ ಅರಣ್ಯೀಕರಣ ವಿಭಾಗ ಕಾವುಗೋಳಿ ಪ್ರದೇಶದಲ್ಲಿ ಲಭಿಸಿದ ಕಡಲಾಮೆಯ ಮೊಟ್ಟೆಗಳಲ್ಲಿ ಬಿರಿದ ೯೫ ಒಲಿವ್ ರೆಡ್ಲಿ ಆಮೆ ಮರಿಗಳನ್ನು ವಾರ್ಡ್ ಪ್ರತಿನಿಧಿ ಪಿ. ಮಲ್ಲಿಕರ ಉಪಸ್ಥಿತಿ ಯಲ್ಲಿ ಸಮುದ್ರಕ್ಕೆ ಬಿಡಲಾಯಿತು. ಕಾಸರಗೋಡು ಸೋಶ್ಯಲ್ ಫಾರೆಸ್ಟ್ರಿ ರೇಂಜ್ ಫಾರೆಸ್ಟ್ ಆಫೀಸರ್ ಗಿರೀಶ್ ಕೆ., ಡೆಪ್ಯುಟಿ ರೇಂಜ್ ಫಾರೆಸ್ಟ್ ಆಫೀಸರ್ ವಿಜಯನಾಥ್ ಕೆ.ಆರ್, ಸೆಕ್ಷನ್ ಫಾರೆಸ್ಟ್ ಆಫೀಸರ್ ಕೆ. ಜಯಕುಮಾರ್ ಎಂಬಿವರು ನೇತೃತ್ವ ನೀಡಿದರು. ಬೇಕಲ ಕೋಸ್ಟರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಯೂಸಫ್ ನಡುತ್ತರಪರಂಬಿಲ್, ಸಬ್ ಇನ್ಸ್‌ಪೆಕ್ಟರ್ ರಾಧಾಕೃಷ್ಣನ್, ಕಡಲಾಮೆ ಸಂರಕ್ಷಣಾ ವಾಚರ್‌ಗಳಾದ ಬಿ.ಕೆ. ಜಯೇಶ್, ವೇದಪ್ರಕಾಶ್, ಸ್ಥಳೀಯರು ಭಾಗವಹಿಸಿದರು.







