ಕಾಸರಗೋಡು: ಆಂಬುಲೆನ್ಸ್ ಮಾಜಿ ಚಾಲಕ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಲ್ಲಾ ಕಡಪ್ಪುರ ನಿವಾಸಿ ಅಬ್ದುಲ್ಲ (53) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ 8.15 ರ ವೇಳೆ ಇವರು ಕಾಞಂಗಾಡ್ ರೈಲ್ವೇ ನಿಲ್ದಾಣ ಸಮೀಪ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವಿಷಯ ತಿಳಿದು ಹೊಸದುರ್ಗ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾವಕ್ಕೆ ತಲುಪಿಸಿದ್ದಾರೆ. ಅಬ್ದುಲ್ಲ ಅರಿಮಲ ಹಾಸ್ಪಿಟಲ್‌ನ ಮಾಜಿ ಆಂಬುಲೆನ್ಸ್ ಚಾಲಕರಾಗಿದ್ದರು.
