ಕಾಸರಗೋಡು: ಪ್ರಧಾನಮಂತ್ರಿ ನರೇಂದ್ರಮೋದಿಯವರ ವಿಶೇಷ ಅಂಗರಕ್ಷಕ ಪಡೆ (ಎಸ್ಪಿಜಿ)ಯ ಮಾಜಿ ಜವಾನ ಕಾಸರಗೋಡು ನಿವಾಸಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಚಿತ್ತಾರಿಕಲ್ ಮಂಟಪತಲಚ್ಚಿ ರದ ಮಾಣಿಕುಟ್ಟಿ-ಗ್ರೇಸಿ ಕುಟ್ಟಿ ದಂಪತಿ ಪುತ್ರ ಶಿನ್ಸ್ ತಲಚ್ಚಿರ (45) ಸಾವನ್ನಪ್ಪಿದ ದುರ್ದೈವಿ. ರಾಜಸ್ಥಾನ ದಲ್ಲಿ ನಿನ್ನೆ ನಡೆದ ಬೈಕ್ ಅಪಘಾತ ದಲ್ಲಿ ಇವರು ಪ್ರಾಣ ಕಳೆದುಕೊಂ ಡಿದ್ದಾರೆ. ಗಡಿಭದ್ರತಾ ಪಡೆ (ಬಿಎಸ್ಎಫ್) ಜವಾನರಾಗಿರುವ ಶಿನ್ಸ್ ಈ ಹಿಂದೆ ಡೆಪ್ಯುಟೇಶನ್ನಲ್ಲಿ ಪ್ರಧಾನಮಂತ್ರಿಯವರ ಎಸ್ಪಿಜಿ ಪಡೆಗೆ ಸೇರ್ಪಡೆಗೊಂಡಿದ್ದರು. ಅವರು ಒಂಭತ್ತು ವರ್ಷಗಳ ಕಾಲ ಪ್ರಧಾನಮಂತ್ರಿ ನರೇಂದ್ರಮೋದಿ ಯವರ ವಿಶೇಷ ಅಂಗರಕ್ಷಕ ಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಒಂದು ತಿಂಗಳ ಹಿಂದೆಯಷ್ಟೇ ಅವರ ಡೆಪ್ಯು ಟೇಶನ್ ಅವಧಿ ಕೊನೆಗೊಂಡಿತು. ನಂತರ ಅವರು ಮತ್ತೆ ಬಿಎಸ್ಎಫ್ ಪಡೆಯಲ್ಲಿ ಮುಂದುವರಿದರು. ಡಾ. ಮನ್ಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದ ವೇಳೆಯಲ್ಲೂ ಶಿನ್ಸ್ ಎಸ್ಪಿಜಿ ಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಶಿನ್ಸ್ ತಮ್ಮ ವಾಸವನ್ನು ಇತ್ತೀಚೆಗೆ ಚಿತ್ತಾರಿಕ್ಕಲ್ನಿಂದ ಕಣ್ಣೂರು ಮಣಕಡವಿಗೆ ಬದಲಾಯಿಸಿದ್ದರು. ಇವರು ಹೆತ್ತವರ ಹೊರತಾಗಿ ಪತ್ನಿ ಜಿಸ್ಮಿ (ನರ್ಸ್ ಉದಯಗಿರಿ), ಮಕ್ಕಳಾದ ಫಿಯೋನಾ, ಫೆಬಿನ್, ಸಹೋದರರಾದ ಶೈನ್, ಶೆರಿನ್, ಶೆಬಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ನಾಳೆ ಮಣಕಡವಿನ ಮನೆಗೆ ತಲುಪಿಸಿ ಅಂತ್ಯದರ್ಶನಕ್ಕಿರಿಸಿದ ಬಳಿಕ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು.