ಮುಳ್ಳೇರಿಯ: ಸಿಪಿಐ ಕಾರಡ್ಕ ಬ್ರಾಂಚ್ ಮಾಜಿ ಕಾರ್ಯದರ್ಶಿ ಅಡ್ಕಂ ಮಲಯರ್ ವಳಪ್ಪ್ ನಿವಾಸಿ ಚೋಯಿ (74) ನಿಧನಹೊಂದಿ ದರು. ಬದಿಯಡ್ಕ ದಿನೇಶ್ ಬೀಡಿ ಸೊಸೈಟಿಯ ಸ್ಥಾಪಕ ನಿರ್ದೇಶಕರಾಗಿದ್ದರು.
ಮೃತರು ಪತ್ನಿ ನಾರಾಯಣಿ, ಮಕ್ಕಳಾದ ಸುಮೇಶ್ ಎಂ (ಸಿಪಿಐ ಕಾರಡ್ಕ ಬ್ರಾಂಚ್ ಕಾರ್ಯದರ್ಶಿ), ನಿಶಾ ಎಂ, ಸೊಸೆ ಮಂಜುಷಾ, ಅಳಿಯ ರಾಜೇಶ್ ಅಟ್ಟೆಂಗಾನಂ, ಸಹೋದರರಾದ ಎಂ. ಅಚ್ಯುತನ್, ಎಂ. ಕೃಷ್ಣನ್ (ಸಿಪಿಐ ಜಿಲ್ಲಾ ಕೌನ್ಸಿಲ್ ಸದಸ್ಯ), ಸಹೋದರಿಯ ರಾದ ಜಾನಕಿ, ಸರೋಜಿನಿ, ಭವಾನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇಬ್ಬರು ಸಹೋದರ ರಾದ ಕುಂಞಿನ್, ನಾರಾಯಣನ್ ಈ ಹಿಂದೆ ನಿಧನಹೊಂದಿದ್ದಾರೆ.