ಪ್ಲಾಂಟೇಶನ್ ಕಾರ್ಪರೇಶನ್ ಮಾಜಿ ನೌಕರ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಬೋವಿಕ್ಕಾನ: ರಾತ್ರಿ ಆಹಾರ ಸೇವಿಸಿ ನಿದ್ರಿಸಿದ್ದ ವ್ಯಕ್ತಿ ಬೆಳಿಗ್ಗೆ ನಾಪತ್ತೆಯಾಗಿದ್ದು, ಶೋಧ ನಡೆಸಿದಾಗ ಬಾವಿಯಲ್ಲಿ ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೋವಿಕ್ಕಾನ ಮುಪ್ಪತ್ತಿಯಾರ್ ಎಂಬಲ್ಲಿನ ಎಂ. ಚೋಯಿ (73) ಮೃತ ವ್ಯಕ್ತಿ. ಇವರು ಮುಳಿ ಯಾರು ಪ್ಲಾಂಟೇಶನ್ ಕಾರ್ಪರೇಶನ್‌ನಲ್ಲಿ ದೀರ್ಘ ಕಾಲ ನೌಕರನಾಗಿದ್ದರು. ನಿನ್ನೆ ಬೆಳಿಗ್ಗೆ ಇವರು ಮನೆಯಿಂದ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಶೋಧ ನಡೆಸಿದಾಗ ಮೃತದೇಹ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎಂ. ಸತೀಶನ್ ನೇತೃತ್ವದ ಅಗ್ನಿಶಾಮಕದಳ ಮೃತದೇಹವನ್ನು ಮೇಲಕ್ಕೆತ್ತಿದೆ.

ಚೋಯಿ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರೆಂದು ಸಂಬಂಧಿಕರು ತಿಳಿಸಿದ್ದಾರೆ. ಘಟನೆ ಬಗ್ಗೆ ಆದೂರು ಪೊಲೀ ಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಪುಷ್ಪವಲ್ಲಿ, ಮಕ್ಕಳಾದ ಬಿಂದು, ವೀಣ, ಅಳಿಯಂದಿರಾದ ಜಯನ್, ಗಂಗಾಧರನ್, ಸಹೋದರರಾದ ಅಪ್ಪು, ಚಿರುದಕುಂಞಿ ಹಾಗೂ ಅಪಾರ ಬಂಧು-ಮಿತ್ರರನ್ನ ಅಗಲಿದ್ದಾರೆ.

You cannot copy contents of this page