ಕಾಸರಗೋಡು: ಕಾಸರಗೋಡಿನಲ್ಲಿ ಸರ್ವ ವಲಯಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಪ್ರೊಫೆಸರ್ ವಿ. ಗೋಪಿನಾಥನ್ (71) ನಿಧನ ಹೊಂದಿದರು. ಅಧ್ಯಯನ ಪ್ರವಾಸ ತಂಡದೊಂದಿಗೆ ಮಲಪ್ಪುರಂಗೆ ತೆರಳಿದ್ದ ಇವರಿಗೆ ನಿನ್ನೆ ರಾತ್ರಿ 12 ಗಂಟೆ ವೇಳೆ ಉಸಿರಾಟ ತೊಂದರೆ ಕಂಡುಬಂದಿತ್ತು. ಜೊತೆಗಿದ್ದವರು ಕೂಡಲೇ ವಂಡೂರು ನಿಮ್ಸ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಕಾಸರಗೋಡು ಟ್ರಾವಲ್ ಕ್ಲಬ್‌ನ ಮಲಪ್ಪುರಂ ಜಿಲ್ಲಾ ಅಧ್ಯಯನ ಪ್ರವಾಸಕ್ಕಾಗಿ ನಿನ್ನೆ ಬೆಳಿಗ್ಗೆ ಇವರು ತಂಡದೊಂದಿಗೆ ಮಲಪ್ಪುರಂಗೆ ತೆರಳಿದ್ದರು. ಪತ್ನಿ ಪ್ರೊಫೆಸರ್ ಹಾಗೂ ಕಾಸರಗೋಡು ಸರಕಾರಿ ಕಾಲೇಜಿನ ಮಾಜಿ ಪ್ರಾಂಶುಪಾಲೆಯಾದ ಶ್ರೀಮತಿ ಕೂಡ ಜೊತೆಗಿದ್ದರು. ಕಾಸರಗೋಡು ಸರಕಾರಿ ಕಾಲೇಜು ಪ್ರಾಂಶುಪಾಲ, ಉತ್ತರ ವಲಯ ಕಾಲೇಜಿಯೇಟ್ ಡೈರಕ್ಟರ್ ಮೊದಲಾದ ಅಧಿಕೃತ ಸ್ಥಾನಗಳಲ್ಲಿ ಪ್ರೊಫೆಸರ್ ವಿ. ಗೋಪಿ ನಾಥನ್ ಸೇವೆ ಸಲ್ಲಿಸಿದ್ದಾರೆ.
ಕಾಸರ ಗೋಡು ವಲಯದ ಪುರೋಗಮನ ಚಟುವಟಿಕೆಗಳಿಗೆ ಸಂಬಂಧಿಸಿ ಹಲವು ಸಂಘಟನೆಗಳು, ಶಿಕ್ಷಣ, ಸಾಮಾಜಿಕ, ಸಾಂಸ್ಕೃತಿ ಸಂಘಟನೆಗಳು, ಕಲಾ ಸಾಹಿತ್ಯ ಒಕ್ಕೂಟಗಳಲ್ಲಿ ಇವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಇವರ ಓರ್ವ ಪುತ್ರಿ ಶ್ರುತಿ ಮನೋಜ್ ಅಮೆರಿಕದಲ್ಲಿ ಇಂಜಿನಿಯರ್‌ರಾಗಿದ್ದಾರೆ. ಇನ್ನೋರ್ವ ಪುತ್ರಿ ಶ್ವೇತ ಕಣ್ಣೂರಿನಲ್ಲಿ ಡಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರೊಫೆಸರ್ ಗೋಪಿನಾಥನ್‌ರವರ ಅಗಲುವಿಕೆಯಿಂದ ನಾಡಿನಲ್ಲಿ ಶೋಕ ಸಾಗರ ಸೃಷ್ಟಿಸಿದೆ.