ನಡೆ ಹಾದಿಯ ನೀರಿನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ರಸ್ತೆ ಬದಿಯ ಕಾಲುದಾರಿಯ ನೀರಿನಲ್ಲಿ ವ್ಯಕ್ತಿಯೋರ್ವ  ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಪಾಡಿ ಗ್ರಾಮದ ಕರುವಂಗೋಳು ನಿವಾಸಿ ನಾರಾಯಣ ನಾಯ್ಕ (69) ಸಾವನ್ನಪ್ಪಿದ ವ್ಯಕ್ತಿ.  ಸಾಮಗ್ರಿ ತರಲೆಂದು ಇವರು ನಿನ್ನೆ ಬೆಳಿಗ್ಗೆ ೯ ಗಂಟೆಗೆ ಮನೆಯಿಂದ ಹೊರಟಿದ್ದರು.  ತಡವಾದರೂ ಅವರು ಮನೆಗೆ ಹಿಂತಿ ರುಗಲಿಲ್ಲ. ಈಮಧ್ಯೆ ಎದುರ್ತೋಡು ಜಂಕ್ಷನ್‌ನ ಕಾಲುದಾರಿಯಲ್ಲಿ ನೀರು ಕಟ್ಟಿ ನಿಂತಿದ್ದ ಸ್ಥಳದಲ್ಲಿ ಅವರು ನಿನ್ನೆ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರ. ಆ ಬಗ್ಗೆ ನೀಡಲಾದ ಮಾಹಿತಿಯಂತೆ ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ ಬಳಿಕ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿದರು. ಮರಣೋತ್ತರ ಪರೀಕ್ಷೆಯ ವರದಿ ಲಭಿಸಿದ ಬಳಿಕವಷ್ಟೇ ಸಾವಿನ ಕಾರಣ ತಿಳಿಯಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.

ಮೃತರು ಪತ್ನಿ ಜಯಂತಿ, ಮಕ್ಕಳಾದ ಸುಧಾಕರ,ಸುರೇಶ್, ಜಯರಾಮ್, ಸುಧಾಮಣಿ, ಜಯಲಕ್ಷ್ಮಿ, ಅಳಿಯಂದರಾದ ಜಯರಾಮ, ಬಾಲಕೃಷ್ಣ ಹಾಗೂ ಅಪಾರ ಬಂಧ-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page