ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ನೀಲೇಶ್ವರ ಪಟ್ಟೇನದಲ್ಲಿ ಹೋಟೆಲ್ ನಡೆಸುತ್ತಿದ್ದ ವ್ಯಕ್ತಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಟ್ಟೇನ ವರಪ್ರಾತ್ ಕೃಷ್ಣನ್ ನಾಯರ್ (74) ಮೃತಪಟ್ಟವರು.  ಇಲ್ಲಿನ ಬ್ಲೋಕ್ ಕಚೇರಿಯ ಲಿಂಕ್ ರಸ್ತೆ ಬದಿ ಹೋಟೆಲ್ ನಡೆಸುತ್ತಿದ್ದರು. ನೀಲೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಮಹಜರು ನಡೆಸಿದ್ದು, ಮೃತದೇಹವನ್ನು ಕಾಞಂ ಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಮೃತರು ಪತ್ನಿ ಕೆ.ವಿ. ಜಾನಕಿ, ಮಕ್ಕಳಾದ ಕೆ.ವಿ. ಮಿನಿ ಶ್ಯಾಮಲ, ಕೆ.ವಿ. ಬಿಂದು, ಅಳಿಯಂದಿ ರಾದ ಭಾಸ್ಕರನ್, ರವೀಂದ್ರನ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ಕೆ.ವಿ. ಪ್ರದೀಪನ್ ಈ ಹಿಂದೆ ನಿಧನ ಹೊಂದಿದ್ದಾರೆ.

You cannot copy contents of this page